ಜಿಲ್ಲೆ

ಬೆಳ್ಳಂಬೆಳಗ್ಗೆ ಗೀಜರ್ ಬ್ಲಾಸ್ಟ್: ಹೊತ್ತಿ ಉರಿದ ಮನೆ

ಬೆಳಗಾವಿ: ಗೋಕಾಕ್​ನ ಬಸವ ನಗರದಲ್ಲಿ ಗುರುವಾರ ಬೆಳಗ್ಗೆ ಗೀಜರ್ ಬ್ಲಾಸ್ಟ್ ಆಗಿ ಮನೆಯೊಂದು ಹೊತ್ತಿ ಉರಿದಿದೆ.

ಸುರೇಶ ಶಾ ಎಂಬುವರಿಗೆ ಸೇರಿದ ಮನೆಯ ಎರಡನೇ ಮಹಡಿಯಲ್ಲಿ ಗೀಜರ್ ಬ್ಲಾಸ್ಟ್ ಆಗಿದ್ದು, ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗಳು ಕಟ್ಟಡದಿಂದ ಹೊರಗೆ ಕಾಣಿಸಿದ್ದು, ಜನರು ಆತಂಕದಿಂದ ಓಡಿ ಬಂದಿದ್ದಾರೆ. ಇದನ್ನೂ ಓದಿರಿ ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ಆರಿಸಲು ಯಶಸ್ವಿಯಾಗಿದ್ದಾರೆ. ಈ ದುರಂತದಲ್ಲಿ ಮನೆ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.