ಮುಂಡಗೋಡ: ಪಟ್ಟಣದ ಗಾಂಧಿನಗರದ ನ್ಯಾಸರ್ಗಿ ರಸ್ತೆಯ ಪಕ್ಕದಲ್ಲಿರುವ ಉದ್ಯಾನದಲ್ಲಿ ಗಿಡಗಂಟಿ ಬೆಳೆ ದಿದ್ದು, ಕೆಲವರು ಮನೆಗಳಲ್ಲಿನ ತ್ಯಾಜ್ಯವನ್ನು ಉದ್ಯಾನದಲ್ಲಿ ಹಾಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ವರ್ಷಗಳ ಹಿಂದೆ ಪಟ್ಟಣ ಜನರಿಗೆ ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣ ಪಂಚಾಯಿತಿ ಆಡಳಿತ ಸಮಿತಿಯವರು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ನಂತರ ಲಕ್ಷಾಂತರ ರೂ. ಅನುದಾನದಲ್ಲಿ ಉದ್ಯಾನ ಜಾಗದ ಸುತ್ತಲು ಕಾಂಪೌ ಂಡ್ ನಿರ್ವಿುಸಿದರು. ನಂತರ ಜನರಿಗೆ ಕುಳಿ ತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದ್ದರು. ಪಟ್ಟಣ ಪಂಚಾಯಿತಿಯವರು ಪಟ್ಟಣ ವ್ಯಾಪ್ತಿಯಲ್ಲಿ ಉದ್ಯಾನ ನಿರ್ವಿುಸುವುದನ್ನು ಕಂಡು ಜನರು ಸಂತಸಗೊಂಡಿದ್ದರು. ಆದರೆ, ವರ್ಷಗಳು ಉರುಳಿದಂತೆ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು ಇದೀಗ ಉದ್ಯಾನದಲ್ಲಿ ಗಿಡಗಂಟಿ ಬೆಳೆದುಕೊಂಡಿವೆ.
ಪಟ್ಟಣದ ಕೆಲವರು ಹಳೆಯ ಮನೆಯ ಮಣ್ಣು ಸೇರಿ ಟ್ರ್ಯಾಕ್ಟರ್ ಮೂಲಕ ತ್ಯಾಜ್ಯ ಮತ್ತು ಇತರ ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದರಿಂದ ಈ ಸ್ಥಳಕ್ಕೆ ಜನರು ಹೋಗಲು ಹಿಂದೇಟು ಹಾಕಿ ಪಪಂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣಕ್ಕೆ ಮಾದರಿಯಾಗಬೇಕಿದ್ದ ಈ ಉದ್ಯಾನವು ಗಿಡಗಂಟಿಗಳು, ತ್ಯಾಜ್ಯಗಳಿಂದ ತುಂಬುತ್ತಿದೆ.
ಈ ಜಾಗವು ಅರಣ್ಯ ವ್ಯಾಪ್ತಿಗೆ ಬರುತ್ತದೆ. ತಕ್ಷಣವೇ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚಿಸುತ್ತೇನೆ. ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು. | ಚಂದ್ರಶೇಖರ ಬಿ.ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ
ಉದ್ಯಾನ ಬಳಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಇದೆ. ಹಿಂಬದಿಯಲ್ಲಿ ಗಿಡಗಂಟಿ ಬೆಳೆದು ಸ್ವಚ್ಛತೆ ಇಲ್ಲದಂತಾಗಿದೆ. ಸಂಬಂಧಪಟ್ಟವರು ಆ ಸ್ಥಳವನ್ನು ಸ್ವಚ್ಛಗೊಳಿಸಿ ಉತ್ತಮವಾದ ಉದ್ಯಾನ ನಿರ್ವಿುಸಬೇಕು. | ಅಶೋಕ ಚಲವಾದಿ ಪಪಂ ಸದಸ್ಯ ಪಟ್ಟಣ ಪಂಚಾಯಿತಿ