ಜಿಲ್ಲೆ

ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ಹಲವರಿಗೆ ಗಾಯ

ರಾಮನಗರ : ತಾಲೂಕಿನ ಅಚ್ಚಲುದೊಡ್ಡಿ ಬಳಿಯ ಮನೆಯೊಂದರಲ್ಲಿ ಗುರುವಾರ ಬೆಳಿಗ್ಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ನಾಲ್ಕು ಜನರು ಗಾಯಗೊಂಡ ಘಟನೆ ನಡೆದಿದೆ.

ಸೀಜರ್ ಸಿದ್ದನ ಸಹಚರರು ಮತ್ತು ಸಂಜು ಹಾಗೂ ಆತನ ಸಹಚರರ ನಡುವೆ ಗಲಾಟೆ ನಡೆದಿದೆ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್ ಜನರನ್ನು ಬೆಚ್ಚಿಬಿಳಿಸಿದೆ. ಹಣಕಾಸು ವಿಚಾರ ಮತ್ತು ಹಳೇ ದ್ವೇಷ ಇನ್ನಿತರ ವಿಚಾರವಾಗಿ ಗ್ಯಾಂಗ್ ವಾರ್ ನಡೆದಿದೆ ಎನ್ನಲಾಗಿದೆ. ಅಚ್ಚಲುದೊಡ್ಡಿಯ ಸೇನಾಪತಿ ವೈಟ್ಲೆ ಕಾರ್ಖಾನೆ ಪಕ್ಕದ ಮನೆಯೊಂದರಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಘಟನೆ ನಡೆದಿದೆ.

ಅಚ್ಚಲು ಗ್ರಾಮದ ಬಳಿ ಒಂಟಿ ಮನೆಯಲ್ಲಿದ್ದ ಸೀಜರ್ ಸಿದ್ದನ ಸಹಚರರ ಮೇಲೆ ಕಾರು ಮತ್ತು ಬೈಕ್‌ಗಳಲ್ಲಿ ಬಂದ 10ಕ್ಕೂ ಹೆಚ್ಚಿನ ಮಂದಿ ಸÀಂಜು ಗ್ಯಾಂಗ್ ಸಿದ್ದು ಸಹಚರರ ಮೇಲೆ ಏಕಾಏಕಿ ಅಟ್ಯಾಕ್ ನಡೆದಿದೆ. ಈ ವೇಳೆ ಸೀಜರ್ ಸಿದ್ದನ ಕಡೆಯವರು ಎನ್ನಲಾದ ನಾಲ್ಕು ಜನ ಸಹಚರರು ಗಾಯಗೊಂಡಿದ್ದಾರೆ ಖಾಸಗಿ ಆಸ್ಪತ್ರೆಯಲ್ಲಿ ಗಾಯಗೊಂಡ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸೀಜರ್ ಸಿದ್ದನ ಟೀಂ ಕಡೆಯವರೆನ್ನಲಾದ ಬಬ್ಲು ಮತ್ತು ಆತನ ಸ್ನೇಹಿತರು ಅಚ್ಚಲುದೊಡ್ಡಿಯ ಒಂಟಿ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಸಂಜು ಮತ್ತು ಆತನ ಸ್ನೇಯಿತರು ಕಾರು ಮತ್ತು ಬೈಕುಗಳಲ್ಲಿ ಬಂದು ಏಕಾಏಕಿ ಅಟಾಕ್ ಮಾಡಿದ್ದಾರೆ ಎನ್ನಲಾಗಿದೆ.

ಮಾರಕಾಸ್ತçಗಳಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆದಿದೆ ಎಂದು ಗ್ರಾಮಾಂತರ ಠಾಣೆಯಲ್ಲಿ ಸೀಜರ್ ಸಿದ್ದು ಸಹಚರ ಎನ್ನಲಾದ ಹರ್ಷ ದೂರು ದಾಖಲಿಸಿದ್ದಾನೆ. ಬಬ್ಲು, ಮಧು, ಹರ್ಷ ಮತ್ತು ಗಣೇಶ್ ಗಾಯಗೊಂಡಿದ್ದಾರೆ. ಸಂಜು, ಪ್ರಮೋದ್, ಪುನೀತ, ದೇವರಾಜು, ಶಶಾಂಕ್, ಅರುಣ, ಸೇರಿದಂತೆ 8 ಮಂದಿಯ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದಾರೆ.

ಗಲಾಟೆಗೆ ಕಾರಣ

ಬಬ್ಲೂ ಎನ್ನುವವನು ಸಂಜು ಕಡೆಯ ಹುಡುಗನಿಗೆ ಈ ಹಿಂದೆ ಬೈದಿದ್ದ ಜೊತೆಗೆ ಆಗಾಗ ಎರಡೂ ಗುಂಪುಗಳ ನಡುವೆ ಗಲಾಟೆ ಮತ್ತು ಬೈದಾಟ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿಂದೆ ಐಜೂರು ಠಾಣೆಯಲ್ಲಿ ಕೇಸು ಕೂಡ ದಾಖಲಾಗಿದೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಡಿಎಸ್‌ಪಿ ಶ್ರೀನಿವಾಸ್ ಮತ್ತು ರಾಮನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಮೇಶ್, ಸಬ್‌ಇನ್‌ಸ್‌ಪೆಕ್ಟರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಪೋಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.