ಮಂಗಳೂರು: ನಗರದ ಶಿವಭಾಗ್ ರಸ್ತೆಯಲ್ಲಿರುವ ಪ್ಲಾೃಟ್ ವೊಂದಕ್ಕೆ ಸುಮಾರು 15 ಮಂದಿ ದುಷ್ಕರ್ಮಿಗಳ ತಂಡವೊಂದು ಅಕ್ರಮವಾಗಿ ಪ್ರವೇಶ ಮಾಡಿ ದಾಂಧಲೆ ನಡೆಸಿದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕದ್ರಿ ಅಶೋಕ ಮ್ಯಾನರ್ ಅಪಾರ್ಟ್ ಮೆಂಟ್ ನಿವಾಸಿಗಳಾದ ಹಮೀದ್, ವಿಲಿಯಂ ಜಿ.ಸಿ., ಪರಶುರಾಮ ಸೇರಿದಂತೆ 15 ಮಂದಿ ಪ್ರಕರಣದ ಆರೋಪಿಗಳು.
ಪ್ರಕರಣದ ವಿವರ: ನಗರದ ಶಿವಭಾಗ್ ರಸ್ತೆಯಲ್ಲಿನ ಕದ್ರಿ ಬಿ ಗ್ರಾಮದಲ್ಲಿ ಅಶೋಕ್ ಮ್ಯಾನರ್ ಅಪಾಟ್ಮೆರ್ಂಟ್ ಇದ್ದು, ಇದರಲ್ಲಿ ದೂರುದಾರರಾದ ಅಶೋಕ್ ರೈ 501ರಿಂದ 503 ನಂಬರ್‌ನ ಫ್ಲ್ಯಾಟ್ ಹೊಂದಿದ್ದರು. ಇವರು ಬೆಂಗಳೂರಿನಲ್ಲಿರುವುದನ್ನು ತಿಳಿದಿದ್ದ ಅದೇ ಫ್ಲ್ಯಾಟ್ ನ ಮೂವರು ಸೇರಿದಂತೆ ಸುಮಾರು 15ಮಂದಿ ತಂಡ ಮಾ.28ರಂದು 10ಗಂಟೆ ಸುಮಾರಿಗೆ ಫ್ಲ್ಯಾಟ್ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ಬಗ್ಗೆ ದೂರುದಾರರ ಅಕ್ಕನ ಮಗನಾದ ಸುಬ್ಬಯ್ಯ ರೈ ಅವರು ಕರೆ ಮಾಡಿ ಮಾಹಿತಿ ನೀಡಿದ್ದು, ಫ್ಲ್ಯಾಟ್ ಗೆ ಬಂದು ನೋಡಿದಾಗ ಸೊತ್ತುಗಳಿಗೆ ಹಾನಿ ಮಾಡಿರುವುದು ಗಮನಕ್ಕೆ ಬಂದಿದೆ.
ಕಿಡಿಗೇಡಿಗಳು ಫ್ಲ್ಯಾಟ್ ಗಳಿಗೆ ಅತಿಕ್ರಮ ಪ್ರವೇಶ ಮಾಡಿ ಮೂರು ಫ್ಲ್ಯಾಟ್ ಗಳನ್ನು ಇಬ್ಬಾಗ ಮಾಡುವ ಗೋಡೆಗಳು, ಪ್ಲಾೃಟ್‌ನಲ್ಲಿದ್ದ ಪೀಠೋಪಕರಣಗಳು ಮತ್ತು ಸೋಫಾಸೆಟ್, 3 ಟಿವಿ ಸೆಟ್‌ಗಳು, 8 ಗೀಸರ್‌ಗಳು, ಹವಾನಿಯಂತ್ರಕಗಳು, 8 ಕಾಟ್ ಗಳು, 8 ಹಾಸಿಗೆಗಳು, ವಿದ್ಯುತ್ ಉಪಕರಣಗಳು, 3 ಫ್ರಿಡ್ಜ್ ಗಳು, ಅಡುಗೆ ಪಾತ್ರೆಗಳು, 8 ಗಾದ್ರೇಜ್ ಕಪಾಟು, ವಾಶ್ ರೂಂ ಕಮೋಡ್‌ಗಳು, ವಾಶ್ ಬೇಸಿನ್‌ಗಳು, ಎಕ್ಸಿಕ್ಯೂಟಿವ್ ಚೇರ್ ಗಳು ಮತ್ತು ಬಾಗಿಲುಗಳನ್ನು ಕಳವು ಹಾಗೂ ಹಾನಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದುಷ್ಕರ್ಮಿಗಳು ಫ್ಲ್ಯಾಟ್ ನಲ್ಲಿ ಸುಮಾರು 1 ಕೋಟಿ ರೂ. ಹೆಚ್ಚು ನಷ್ಟ ಮಾಡಿರುವುದಾಗಿ ಠಾಣೆಗೆ ದೂರು ನೀಡಿದ್ದಾರೆ.
ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.