ಮರಣೊತ್ತರ ಪರೀಕ್ಷೆ ಸಮಯದಲ್ಲಿ ನೆರೆದಿದ್ದ ಜನ. 
ಜಿಲ್ಲೆ

ಒಂಟಿ ಸಲಗದ ಅಂತ್ಯಕ್ರಿಯೆ

ಆಲ್ದೂರು: ಭಾನುವಾರ ಆಲ್ದೂರು ಸಮೀಪದ ಕೆರೆಹಕ್ಲು ಗ್ರಾಮದ ಎಸ್ಟೇಟ್‌ನಲ್ಲಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದ ಒಂಟಿ ಸಲಗದ ಅಂತ್ಯಕ್ರಿಯೆ ಸೋಮವಾರ ಸಂಜೆ ನೆರವೇರಿತು. ಸೋಮವಾರ ಬೆಳಿಗ್ಗೆ 10ರಿಂದ ಆರಂಭಗೊಂಡ ಮರಣೋತ್ತರ ಪರೀಕ್ಷೆ ಸಂಜೆವರೆಗೂ ನಡೆಯಿತು. ಆನೆಯ ದಂತಗಳನ್ನು ಹೊರತೆಗೆದು ಸಂಜೆ ಕಳೆಬರಹವನ್ನು ಸುಟ್ಟುಹಾಕಲಾಯಿತು. ಭದ್ರ ಅಭಯಾರಣ್ಯ ವನ್ಯಜೀವಿ ವೈದ್ಯೆ ಡಾ. ವಿಶಾಖಾ, ಆಲ್ದೂರು ವಲಯ ಅರಣ್ಯಾಧಿಕಾರಿ ಹರೀಶ್, ಸಿಬ್ಬಂದಿ ಇದ್ದರು.