ಜಿಲ್ಲೆ

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

Davangere - Desk - Ganesh M K

ಸಾಸ್ವೆಹಳ್ಳಿ: ಎಲ್ಲ ಮಕ್ಕಳಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಆದರೆ, ಶಿಕ್ಷಕರು ಅಂತಹ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದಾಗ ಮಾತ್ರ ವಿದ್ಯಾರ್ಥಿಗಳ ಪ್ರತಿಭೆ ಪ್ರತಿಭಾ ಕಾರಂಜಿಯಲ್ಲಿ ಅನಾವರಣಗೊಳ್ಳಲು ಸಾಧ್ಯ ಎಂದು ತಾಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಬಿಆರ್‌ಸಿ) ಜಿ.ಕೆ. ಅರುಣ್ ಕುಮಾರ್ ತಿಳಿಸಿದರು.

ರಾಂಪುರ ಗ್ರಾಮದ ನವಸುಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಸಾಸ್ವೆಹಳ್ಳಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.

ಇಂದು 16 ಶಾಲೆಗಳ 480 ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದು, ಇಲ್ಲಿ ವಿಜೇತರಾದ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗುವರು. ಅಲ್ಲಿ ಗೆದ್ದರೆ ಜಿಲ್ಲಾಮಟ್ಟದಲ್ಲಿ ಪ್ರತಿಭೆ ಪ್ರದರ್ಶನ ಮಾಡುವರು ಎಂದರು.

ಗ್ರಾಪಂ ಪಿಡಿಒ ರಾಘವೇಂದ್ರ ಮಾತಾನಾಡಿದರು. ಗ್ರಾಪಂ ಅಧ್ಯಕ್ಷ ರಮೇಶ್ ಎಚ್.ಟಿ., ಸದಸ್ಯ ಮೆಹಬೂಬ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷೆ ನೀಲಮ್ಮ, ಸಿಆರ್‌ಪಿ ಕಾಳಾಚಾರ್, ಶಾಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ಪಾಟೀಲ್, ಕಾರ್ಯದರ್ಶಿ ರಾಜಶೇಖರಯ್ಯ, ಶಿಕ್ಷಕರಾದ ರಾಜ್‌ಕುಮಾರ್, ಚಿನ್ನನಾಯ್ಕ, ಮುಖ್ಯಶಿಕ್ಷಕ ಕಿರಣ್ ಕುಮಾರ್ ಇದ್ದರು.