ಜಿಲ್ಲೆ

ಮಳೆಯನ್ನೂ ಲೆಕ್ಕಿಸದೆ ಫುಡ್​ ಕಿಟ್​ಗಾಗಿ ಸಾಲುಗಟ್ಟಿ ನಿಂತ ಕಾರ್ಮಿಕರು...

arunakunigal

ಬಳ್ಳಾರಿ: ಆಹಾರ ಕಿಟ್​ಗಾಗಿ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಭಾನುವಾರ ಬೆಳಗ್ಗೆ ಗೋವಿಂದಪ್ಪ ಕಲ್ಯಾಣ ಮಂಟಪದ ಆವರಣದಲ್ಲಿ ಕಂಡು ಬಂತು.

ಬಳ್ಳಾರಿ ಜಿಲ್ಲಾಡಳಿತ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಆಯೋಜಿಸಿದ್ದ ಫುಡ್​ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಬೆಳ್ಳಂಬೆಳಗ್ಗೆಯೇ ಸಾವಿರಾರು ಕಾರ್ಮಿಕರು ಬ್ಯಾಗ್​ ಸಮೇತ ದೌಡಾಯಸಿದ್ದರು. ಬೆಳಗ್ಗೆ 10.30ಕ್ಕೆ ವಿತರಣೆ ಮಾಡುವುದಾಗಿ ಹೇಳಿದ್ದರೂ ಶಾಸಕ ಸೋಮಶೇಖರ ರೆಡ್ಡಿ 11.30 ಆದರೂ ಆಗಮಿಸಿರಲಿಲ್ಲ. ಹಾಗಾಗಿ ಫುಡ್​ಕಿಟ್ ವಿತರಣೆ ವಿಳಂಬವಾದರೂ ಆಹಾರ ಸಾಮಗ್ರಿ ಪಡೆಯಲು ಮಳೆಯನ್ನೂ ಲೆಕ್ಕಿಸದೆ ಜನರು ಸಾಲುಗಟ್ಟಿ‌ ನಿಂತಿದ್ದರು.