ಪಹಲ್ಗಾಮ್​ನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗ ಆನೇಕಲ್​ೆನ ದೇವರಕೊಂಡಪ್ಪ ವೃತ್ತದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ಹಿರಿಯ ಮುಖಂಡ ಯಂಗಾರೆಡ್ಡಿ, ಪುರಸಭಾ ಸದಸ್ಯ ಬಿ ನಾಗರಾಜು, ಬಿಜೆಪಿ ಮುಖಂಡರಾದ ನರಸಿಂಹ ರೆಡ್ಡಿ, ರು ಇದ್ದರು. 
ಜಿಲ್ಲೆ

ಉಗ್ರರ ದಾಳಿಗೆ ಶ್ರೀದಲ್ಲೇ ತಕ್ಕ ಉತ್ತರ

ಆನೇಕಲ್​ : ಉಗ್ರಗಾಮಿಗಳು ಜಮ್ಮು&ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆಸಿರುವ ದಾಳಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಲಿದೆ ಎಂದು ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ ಕಿಡಿಕಾರಿದರು.

ಪಹಲ್ಗಾಮ್​ನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಪಟ್ಟಣದ ದೇವರಕೊಂಡಪ್ಪ ವೃತ್ತದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು, ಪುಲ್ವಾಮ ದಾಳಿ ನಂತರ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ತನ್ನಎದೆಗಾರಿಕೆ ತೋರಿಸಿತ್ತು. ಪಾಕಿಸ್ತಾನದವರು ಮತ್ತೆ ತಮ್ಮ ನರಿ ಬುದ್ಧಿ ತೋರಿಸಿದ್ದಾರೆ, ಇದಕ್ಕೆ ತಕ್ಕ ಉತ್ತರವನ್ನು ನಮ್ಮ ಭಾರತೀಯ ಸೇನೆ ನೀಡಲಿದೆ ಎಂದರು.

ಉಗ್ರ ತರಬೇತಿಯನ್ನು ನೀಡಿ ಭಯೋತ್ಪಾದನೆಗೆ ದಾರಿ ಮಾಡಿಕೊಡುತ್ತಿರುವ ಪಾಕಿಸ್ತಾನದ ನರಿ ಬುದ್ಧಿಯಿಂದಾಗಿ ಅಮಾಯಕರ ನರಮೇಧ ಮಾಡಲಾಗಿದೆ. ಇಂಥವರಿಗೆ ತಕ್ಕ ಶಾಸ್ತಿ ಆಗಬೇಕು, ಈಗಾಗಲೇ ಕೇಂದ್ರ ಸರ್ಕಾರ ಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತಕ್ಕ ಉತ್ತರ ನೀಡುವ ದಿನ ದೂರ ಇಲ್ಲ ಎಂದರು. 370ನೇ ವಿಧಿ ತೆಗೆದ ಬಳಿಕ ಜಮ್ಮು&ಕಾಶ್ಮೀರದ ಜನರು ನಿಟ್ಟುಸಿರು ಬಿಟ್ಟಿದ್ದರು. ಪ್ರವಾಸೋದ್ಯಮ ಸೇರಿ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗಿತ್ತು, ತದನಂತರ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದವರು ನಿಗಾ ವಹಿಸಬೇಕಿತ್ತು, ಆದರೆ ಅವರು ಎಡವಿದ್ದಾರೆ ಎನಿಸುತ್ತಿದೆ ಎಂದು ಹೇಳಿದರು.

ಬಿಜೆಪಿ ಹಿರಿಯ ಮುಖಂಡ ಯಂಗಾರೆಡ್ಡಿ ಮಾತನಾಡಿ, ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕಬೇಕಿದೆ ಎಂದು ಹೇಳಿದರು. ಮುಖಂಡರಾದ ಸಿಡಿ ಹೊಸಕೋಟೆ ಮುನಿರಾಜು, ದೊಡ್ಡ ಹಾಗಡೆ ಶಂಕರ್​, ವೆಂಕಟೇಶ್​ ರೆಡ್ಡಿ, ದಿನ್ನೂರು ರಾಜು , ಸೋಮಶೇಖರ್​ ರೆಡ್ಡಿ, ಭರತ್​ , ಸತೀಶ್​,ಜೆ. ನಾರಾಯಣಪ್ಪ, ಡಿ ವಿ ಮುರಳಿ ಇದ್ದರು.