ಆನೇಕಲ್​ ತಾಲೂಕಿನ ಚಂದಾಪುರದಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಕೇಂದ್ರ ಮಾಜಿ ಸಚಿವ ಎ ನಾರಾಯಣಸ್ವಾಮಿ, ಬಿಜೆಪಿ ಬೆಂಗಳೂರು ನಗರ ಜಿಲ್ಲಾಧ್ಯ ಸಿ.ರಾಮಮೂರ್ತಿ, ಬಿಜೆಪಿ ಮುಖಂಡರಾದ ಎನ್​.ಶಂಕರ್​, ಜಯಪ್ರಕಾಶ್​ ರೆಡ್ಡಿ, ದಿನ್ನೂರು ರಾಜು, ಎಸ್​.ಆರ್​.ಟಿ.ಅಶೋಕ್​ ಇದ್ದರು. 
ಜಿಲ್ಲೆ

ಭಾರತೀಯ ಸೈನ್ಯದಿಂದ ತಕ್ಕ ಉತ್ತರ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ಪಾಕ್​ಗೆ ಭಾರತೀಯ ಸೈನಿಕರು ಸರಿಯಾದ ರೀತಿಯಲ್ಲಿ ಉತ್ತರ ನೀಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಎ ನಾರಾಯಣಸ್ವಾಮಿ ಹೇಳಿದರು.

ಪಾಕಿಸ್ತಾನದ ಉಗ್ರ ನೆಲಗಳ ಮೇಲೆ ಭಾರತೀಯ ಸೇನೆ ಏರ್​ಸ್ಟ್ರೆಕ್​ ನಡೆಸಿದ ಹಿನ್ನೆಲೆಯಲ್ಲಿ ಚಂದಾಪುರದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರಿಗೆ ಸಿಂಧೂರ ಇಟ್ಟು ಮಾತನಾಡಿದರು. ಪಾಕಿಸ್ತಾನ ಪದೇಪದೆ ತನ್ನ ನರಿ ಬುದ್ಧಿಯನ್ನೇ ತೋರಿಸುತ್ತಾ ಭಾರತದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಉಗ್ರರನ್ನು ಮುಂದೆ ಬಿಟ್ಟು ತನ್ನ ಕೆಟ್ಟ ಚಾಳಿ ತೋರಿಸುತ್ತಾ ಬಂದಿದೆ, ಆದರೆ ಇತ್ತೀಚೆಗೆ 26 ಜನರ ನರಮೇಧ ಮಾಡುವ ಮೂಲಕ ಉಗ್ರರು ಭಾರತೀಯರ ಪತ್ನಿಯರ ಮುಂದೆಯೇ ಪತಿಯರನ್ನು ಕೊಲ್ಲುವ ಮೂಲಕ ಸಿಂಧೂರ ತಿಲಕವನ್ನು ಅಳಿಸಿದ್ದರು. ಇದನ್ನು ಮೋದಿ ಹಾಗೂ ಕೇಂದ್ರ ಸರ್ಕಾರ ತ್ಣೀವಾಗಿ ಪರಿಗಣಿಸಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ರಾತ್ರೋರಾತ್ರಿ ಸರ್ಜಿಕಲ್​ ಸ್ಟ್ರೆಕ್​ ಮೂಲಕ ನೆಲಸಮ ಮಾಡಿ ಭಾರತದ ಶಕ್ತಿ ಏನು ಎನ್ನುವುದನ್ನು ಪಾಕಿಸ್ತಾನಕ್ಕೆ ತೋರಿಸಿದೆ ಎಂದರು.

ಪೆಹಲ್ಗಾಮ್​ ನರಮೇಧವನ್ನು ಎಂದೂ ಯಾವೊಬ್ಬ ಭಾರತೀಯ ಮರೆಯಲು ಸಾಧ್ಯ ಇಲ್ಲ. ಜಿಹಾದಿ ಭಯೋತ್ಪಾದಕರ ಕ್ಯಾಂಪ್​ಗಳಲ್ಲಿ ಉಗ್ರರಿಗೆ ತರಬೇತಿ ನೀಡಿ ನರಮೇಧ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಪಾಕಿಸ್ತಾನಕ್ಕೆ ಭಾರತೀಯ ಸೈನ್ಯ ತಕ್ಕ ಉತ್ತರ ನೀಡಿದೆ ಎಂದರು. ಬಿಜೆಪಿ ಮುಖಂಡರಾದ ಜೆ.ನಾರಾಯಣಪ್ಪ, ವರದರಾಜು, ಪಟಾಪಟ್​ ಶ್ರೀನಿವಾಸ್​, ಸೋಮಶೇಖರ್​ ರೆಡ್ಡಿ, ಕೃಷ್ಣಾರೆಡ್ಡಿ, ಪಿ.ಎಲ್​.ಡಿ ಆಂಜಿನಪ್ಪ,ಬಳ್ಳೂರು ವಸಂತ್​ ರೆಡ್ಡಿ, ಅತ್ತಿಬೆಲೆ ಬಸವರಾಜು,ರಾಮಣ್ಣ, ಕಾವಲಹೊಸಹಳ್ಳಿ ವೆಂಕಟೇಶ್​, ಭರತ್​, ತಿಲಕ್​ಗೌಡ, ಮುರಳಿ, ಶೇಖರ್​ ಇದ್ದರು.