ಜಿಲ್ಲೆ

​ಅಪಪ್ರಚಾರ ಮಾಡುವವರಿಗೆ ಜನರಿಂದ ತಕ್ಕ ಉತ್ತರ

ಹುಕ್ಕೇರಿ: ಮುಳುಗುವ ಭೀತಿಯಲ್ಲಿದ್ದ ಡಿಸಿಸಿ ಬ್ಯಾಂಕಿಗೆ ಅಧ್ಯಕ್ಷನಾದ ಬಳಿಕ 30 ವರ್ಷ ಆಡಳಿತ ನಡೆಸಿ ರಾಜ್ಯದ ನಂ.1 ಬ್ಯಾಂಕ್​ ಆಗಿ ಮಾಡಿದ ಹೆಮ್ಮೆ ನನಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಇಲ್ಲಿನ ವಿಶ್ವರಾಜ ಸಭಾಭವನದಲ್ಲಿ ಬಿಡಿಡಿಸಿ ಬ್ಯಾಂಕ್​ ನಿರ್ದೇಶಕ ಸ್ಥಾನದ ಚುನಾವಣೆ ನಿಮಿತ್ತವಾಗಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಪಿಕೆಪಿಎಸ್​ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಾವಿರಾರು ಕೋಟಿ ರೂ. ಸಾಲಮನ್ನಾ ಮಾಡಲು ಪಾತೀತವಾಗಿ ಶ್ರಮಿಸಿದ್ದೇನೆ. ಅಧಿಕಾರ ವಹಿಸಿಕೊಂಡಾಗ 544 ಕೋಟಿ ರೂ. ಇದ್ದ ದುಡಿಯುವ ಬಂಡವಾಳ ಅಧಿಕಾರ ಬಿಡುವ ವೇಳೆಗೆ 6 ಸಾವಿರ ಕೋಟಿ ರೂ. ಆಗಿದೆ. ಈ ಸಾಧನೆಗೆ ಜಿಲ್ಲೆಯ ಎಲ್ಲ ಸಹಕಾರಿ ಮತ್ತು ರೈತರ ಸಹಕಾರವೆ ಕಾರಣ ಎಂದರು.

ಜನರೆ ಉತ್ತರಿಸುತ್ತಾರೆ: ಬ್ಯಾಂಕ್​ ಬೆಳೆಸಲು ಕೆಲವೊಂದು ಕಠಿಣ ಕ್ರಮ ತೆಗೆದುಕೊಂಡಿದ್ದೇನೆ. ಆದರೆ, ಅದನ್ನು ದೊಡ್ಡ ವಿಷಯವನ್ನಾಗಿ ಮಾಡಿ ಅಪಪ್ರಚಾರ ಮಾಡುತ್ತಿರುವುದು ದುರದುಷ್ಟಕರ. ವಿದ್ಯುತ್​ ಸಹಕಾರ ಸಂದ ಚುನಾವಣೆ ಪ್ರಾರಂಭವಾದ ಹಿನ್ನೆಲೆಯಲ್ಲಿ ನನ್ನ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ತಾಲೂಕಿನ ಜನರಿಗೆ ಸುಳ್ಳು ಹೇಳಿ ಬೇಳೆ ಬೇಯಿಸಿಕೊಳ್ಳಲು ಬರುತ್ತಿರುವುದು ಗೊತ್ತಾಗುತ್ತಿದೆ. ಹುಕ್ಕೇರಿ ಜನರ ರಕ್ತದ ಕಣ ಕಣದಲ್ಲೂ ಸಹಕಾರ ಮತ್ತು ಸ್ವಾಭಿಮಾನ ತುಂಬಿಕೊಂಡಿದೆ. ಆರೋಪಿಸುವವರಿಗೆ ಜನರೆ ಉತ್ತರಿಸುತ್ತಾರೆ ಎಂದು ಹೇಳಿದರು.

ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ರಾಜಕೀಯವಾಗಿ ನಾನು ಮತ್ತು ಕತ್ತಿ ಕುಟುಂಬ ವಿರೋಧಿಗಳಾದರೂ ಸಹಕಾರ ೇತ್ರದಲ್ಲಿ ಹೊಂದಾಣಿಕೆ ಮೂಲಕ ಸಹಕಾರ ೇತ್ರ ಬೆಳೆಸಿದ್ದೇವೆ. ಅಪ್ಪಣ್ಣಗೌಡರ ಹೆಸರು ಬಳಸಿಕೊಂಡು ಚುನಾವಣೆ ಮಾಡಲು ಮುಂದಾಗಿರುವ ವಿರೋಧಿಗಳಿಗೆ ನಾನು ಮತ್ತು ಕತ್ತಿ ಸಹೋದರರು ಅಪ್ಪಣ್ಣಗೌಡರ ಗರಡಿ ಮನೆಯಲ್ಲಿ ಸಹಕಾರ ಪಾಠ ಕಲಿತಿರುವುದು ಗೊತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಹೋರಾಡುತ್ತಿರುವವರಿಗೆ ಜನರೆ ಉತ್ತರ ನೀಡಲಿದ್ದಾರೆ ಎಂದರು.

ತಾಲೂಕಿನ ಎಲ್ಲ ಸಹಕಾರಿ ಮುಖಂಡರು ಮಾತನಾಡಿ, ವಿದ್ಯುತ್​ ಸಹಕಾರ ಸಂ ಉಳಿಸಲು ಜೋಡೆತ್ತುಗಳು ಕೂಡಿಕೊಂಡಿದ್ದು ಹರ್ಷ ತಂದಿದೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದರು.

ತಾಲೂಕಿನ 92 ಪಿಕೆಪಿಎಸ್​ಗಳ ಸಭೆಯಲ್ಲಿ ಶೇ.80 ಪದಾಧಿಕಾರಿಗಳಿದ್ದರು. ಮುಖಂಡರಾದ ಪೃಥ್ವಿ ಕತ್ತಿ, ಪವನ ಕತ್ತಿ, ಮಹಾವೀರ ನಿಲಜಗಿ, ಬಾಬು ಪೂಜೇರಿ, ಆರ್​.ಬಿ.ಪಾಟೀಲ, ಸುನೀಲ ಪರ್ವತರಾವ, ರೋಹನ ನೇಸರಿ, ಗಜಾನನ ಕೊಳ್ಳಿ, ಬಿ.ಎಸ್​.ಸುಲ್ತಾನಪುರ, ನಂದು ಮುಡಶಿ, ರಾಚಯ್ಯ ಹಿರೇಮಠ, ಮಹಾನಿಂಗ ಸನದಿ, ಅಶೋಕ ಪಾಟೀಲ, ಶೀತಲ ಬ್ಯಾಳಿ, ಗುರುರಾಜ ಕುಲಕರ್ಣಿ, ಸುನೀಲ ನೇರ್ಲಿ, ಪ್ರಶಾಂತ ಪಾಟೀಲ, ತಮ್ಮಣ್ಣ ಕರಗುಪ್ಪಿ, ರಾಯಪ್ಪ ಡೂಗ, ಕಲಗೌಡ ಪಾಟೀಲ, ಅರ್ಜುನ ಪಾಟೀಲ, ಎ.ಕೆ.ಪಾಟೀಲ, ದುಂಡನಗೌಡ ಪಾಟೀಲ, ಕೆಂಪಣ್ಣ ದೇಸಾಯಿ, ಶ್ರೀಶೈಲ ಮಠಪತಿ, ಎಸ್​.ಆರ್​.ಕರ್ಕಿನಾಯಿಕ ಇತರರಿದ್ದರು.