ಜಿಲ್ಲೆ

ನೀರು ನಾಯಿ ಕಾಣಿಸಿಕೊಂಡ ಬಳಿಕ ತೊರೆಗಳಲ್ಲಿ ಮೀನುಗಳ ರಾಶಿ!

reportermng

ಮಂಗಳೂರು: ಬೆಳ್ತಂಗಡಿಯಲ್ಲಿ ನೀರು ನಾಯಿ‌ ಕಾಣಿಸಿಕೊಂಡ ಬಳಿಕ ಇದೀಗ ಮೀನುಗಳ ರಾಶಿ ಕಂಡು ಬಂದಿದೆ.

ಧರ್ಮಸ್ಥಳದ ಪುದುವೆಟ್ಟು ಎಂಬಲ್ಲಿ ಸಣ್ಣ ತೊರೆಯಲ್ಲಿ ಮಳೆ ನೀರರು ಹರಿಯುತ್ತಿದ್ದು, ರಾಶಿ ಮೀನುಗಳು ಕಂಡು ಬಂದಿವೆ. ಘಟ್ಟ ಪ್ರದೇಶದಿಂದ ಹರಿದು ಬಂದ ನೀರಿನಲ್ಲಿ ಮೀನುಗಳು ಕಾಣಿಸಿಕೊಂಡಿವೆ. ಈ ತೊರೆಯ ನೀರು ನದಿಗೆ ಹರಿಯುತ್ತೆ. ಸ್ಥಳೀಯರು ಭರ್ಜರಿಯಾಗಿ ಮೀನು ಹಿಡಿದಿದ್ದಾರೆ.