ಚಿಕ್ಕಮಗಳೂರಿನ ಇಂದಾವರದಲ್ಲಿರುವ ನಗರಸಭೆಯ ಕಸದ ಡಂಪಿಂಗ್ ಯಾರ್ಡ್ ಗೆ ಬೆಂಕಿ ಬಿದ್ದ ಪರಿಣಾಮ ದಟ್ಟ ಹೊಗೆ ಆವರಿಸಿಕೊಂಡಿರುವುದು 
ಜಿಲ್ಲೆ

ಡಂಪಿಂಗ್ ಯಾರ್ಡ್ ಗೆ ತಗುಲಿದ ಬೆಂಕಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಇಂದಾವರದಲ್ಲಿರುವ ನಗರ ಸಭೆಯ ಕಸದ ಡಂಪಿಂಗ್ ಯಾರ್ಡ್ ಗೆ ಭಾನುವಾರ ಬೆಂಕಿ ತಗುಲಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟಹೊಗೆ ಆವರಿಸಿತ್ತು. ಮಧ್ಯಾಹ್ನದ ವೇಳೆಗೆ ಡಂಪಿಂಗ್ ಯಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಸಕ್ಕೆ ಬೆಂಕಿ ಬಿದ್ದ ಪರಿಣಾಮ ಎಲ್ಲೆಡೆಯೂ ದಟ್ಟ ಹೊಗೆ ಆವರಿಸಿತ್ತು. ಸಮೀಪದ ರಸ್ತೆಗಳಲ್ಲಿ ವಾಹನ ಚಾಲನೆಗೆ ಅಡ್ಡಿಯಾಗುವಷ್ಟರ ಮಟ್ಟಿಗೆ ಹೊಗೆ ಆವರಿಸಿಕೊಂಡ ಪರಿಣಾಮ ಸ್ಥಳೀಯರು ಕಿರಿಕಿರಿ ಅನುಭವಿಸುವಂತಾಗಿತ್ತು.