ಕುಂದಾಪುರ: ಬೀಜಾಡಿಯ ನಾಗೇಂದ್ರ ಗಾಣಿಗ ಅವರ ನಿರ್ದೇಶನದ ಕನ್ನಡ ಚಲನಚಿತ್ರ ಕುಂದಾಪುರ ಭಾಷೆಯ ಜತೆಗೆ ಕರಾವಳಿ ಸಂಸ್ಕೃತಿಯ ಸೊಗಡು ಬಿಂಬಿಸುವ ದಿಂಸೋಲ್ ಚಲನಚಿತ್ರದ ಪೋಸ್ಟರ್ ಬಿಡುಗಡೆ ತಲ್ಲೂರಿನ ರಾಜಾಡಿಯ ರಕ್ತೇಶ್ವರಿ ದೇವಸ್ಥಾನದಲ್ಲಿ ಬುಧವಾರ ನಡೆಯಿತು.
ಚಿತ್ರದ ಟೈಟಲ್, ಫಸ್ಟ್‌ಲುಕ್ ಪೋಸ್ಟರನ್ನು ವಕೀಲ ಟಿ.ಬಿ.ಶೆಟ್ಟಿ ಅನಾವರಣಗೊಳಿಸಿದರು. ನಟರಾದ ರಘು ಪಾಂಡೇಶ್ವರ್, ಯತೀಶ್ ಬೈಕಂಪಾಡಿ, ಸ್ಥಳೀಯ ಪ್ರಮುಖರು, ಗೋಪಾಡಿಯ ಮಹಿಳಾ ಭಜನಾ ಕುಣಿತ ತಂಡದವರು ಉಪಸ್ಥಿತರಿದ್ದರು.
ನಾಗೇಂದ್ರ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಅಭಿರಾಮಚಂದ್ರ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ರಥಕಿರಣ್, ಶಿವಾನಿ ರೈ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಟಿ ಮಾನಸಿ ಸುಧೀರ್, ದೇವದಾಸ್ ಕಾಪಿಕಾಡ್, ರಘು ಪಾಂಡೇಶ್ವರ್, ದೀಪಕ್ ರೈ.ಪಣಾಜೆ, ಮೈಮ್ ರಾಮ್‌ದಾಸ್, ಗಣೇಶ್ ಕಾರಂತ್, ಸೂರಜ್, ಸುರಭಿ ಮೊದಲಾದವರ ತಾರಾಗಣವಿದೆ.