ಹುಬ್ಬಳ್ಳಿ: ಸ್ಮಾರ್ಟ್ ವಾಚ್ ವಿಚಾರವಾಗಿ ಸ್ನೇಹಿತರಿಬ್ಬರ ಮಧ್ಯೆ ಶುರುವಾದ ಜಗಳದಲ್ಲಿ ಒಬ್ಬನಿಗೆ ಚಾಕುವಿನಿಂದ ಇರಿಯಲಾಗಿದ್ದು, ಆತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಸಿದ್ರಾಮನಗರ ನಿವಾಸಿ ಅಸ್ಲಾಂ ಮಕಂದಾರ್ (31) ಮೃತಪಟ್ಟವ. ಚಾಕುವಿನಿಂದ ಇರಿದ ಆರೋಪಿ ಗಾಯತ್ರಿ ನಗರದ ಮಂಜುನಾಥ ನಾಗರಾಜ ಜೀನಹಳ್ಳಿ ಎಂಬಾತನನ್ನು ಬಂಧಿಸಲಾಗಿದೆ. ಬೆಂಗೇರಿಯ ವೆಂಕಟೇಶ ಕಾಲನಿಯಲ್ಲಿ ಇಬ್ಬರು ಎಗ್ ರೈಸ್ ತಿನ್ನುವ ವೇಳೆ ಜಗಳವಾಗಿದೆ. ನಂತರ ಮಂಜುನಾಥ, ಅಸ್ಲಾಂನ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಸ್ಲಾಂನನ್ನು ಆತನ ಸ್ನೇಹಿತರು ಕಿಮ್್ಸ ಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಕೇಶ್ವಾಪುರ ಹಾಗೂ ವಿದ್ಯಾನಗರ ಠಾಣೆ ಪೊಲೀಸರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ಘಟನೆಗೆ ಕಾರಣವಾದ ಇನ್ನಷ್ಟು ಅಂಶಗಳನ್ನು ಸಂಗ್ರಹಿಸುತ್ತಿದ್ದಾರೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.