ಜಿಲ್ಲೆ

ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಚಿನ್ಮಯ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ವಿಶೇಷ ಪಥ ಸಂಚಲನದೊಂದಿಗೆ 76ನೇ ಗಣರಾಜ್ಯೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು.

ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿದ ಸ್ವಯಂ ಸೇವಕರಿಗೆ ಕರ್ನಾಟಕ ಸರ್ಕಾರದ ಪ್ರಮಾಣ ಪತ್ರ ವಿತರಿಸಲಾಯಿತು. 2024-25ನೇ ಸಾಲಿನ ಸಿರಿಗನ್ನಡ ಪ್ರತಿಭಾ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಭೂಮಿಕಾ ಎಸ್. ದ್ವಿತೀಯ ಸ್ಥಾನ, ಜಿಲ್ಲಾ ಮಟ್ಟದಲ್ಲಿ ವಿಜಯಲಕ್ಷ್ಮಿ ಗಾಜಿ, ಸಂಜನಾ ಹೊಸಮನಿ ತೃತೀಯ ಸ್ಥಾನ, ತಾಲೂಕು ಮಟ್ಟದಲ್ಲಿ ಭೂಮಿಕಾ ಬಿರಾದರ ತೃತೀಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳನ್ನು ಮುಖ್ಯ ಅತಿಥಿ ಚಿನ್ಮಯ ಮಿಷನ್ ಅಧ್ಯಕ್ಷ ಪಾಂಡುರಂಗ ನಾಯ್ಡು, ಷಣ್ಮುಖ ಕೋಳೂರ ಹಾಗೂ ಪ್ರಾಂಶುಪಾಲ ವಿನಾಯಕ ಬಿ.ಕೆ. ಅವರು ಪ್ರಶಸ್ತಿ, ಪ್ರಮಾಣ ಪತ್ರ ನೀಡಿ ಗೌರವಿಸಿದರು.