ಜಿಲ್ಲೆ

ಸಮಾನತೆಯ ಸಂದೇಶ ಸಾರಿದ ಹಬ್ಬ

ಶಿರಹಟ್ಟಿ: ತ್ಯಾಗ, ಬಲಿದಾನ ಹಾಗೂ ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಗುರುವಾರ ಹರಿಪೂರ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈದ್ ಸಂದೇಶ ನೀಡಿದ ಜಾಮಿಯಾ ಮಸೀದಿಯ ಮೌ. ಮಜಹರಖಾನ್ ಪಠಾಣ, ‘ಒಂದು ತಿಂಗಳ ಪರ್ಯಂತ ಕಠಿಣ ಉಪವಾಸ ವ್ರತಾಚರಣೆಯ ಪವಿತ್ರ ರಮಜಾನ್ ಮತ್ತು ತ್ಯಾಗ, ಬಲಿದಾನ ಪ್ರತೀಕದ ಬಕ್ರೀದ್ ಇವೆರಡು ಮುಸ್ಲಿಮರ ಪಾಲಿಗೆ ಧರ್ಮದ ಮಾರ್ಗದಲ್ಲಿ ಬದುಕಿನ ಪಾಠಕಲಿಸುವ ಸ್ಮರಣೆಯ ಹಬ್ಬಗಳಾಗಿವೆ’ ಎಂದರು.

ಈ ದಿನ ಭಕ್ತರು ಪವಿತ್ರ ಹಜ್ ಯಾತ್ರೆಗೆ ತೆರಳಿ ಮೆಕ್ಕಾದಲ್ಲಿ ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದರು.

ಮೌ.ಅಬ್ದುಲ್‌ಲತೀಫ ಮಕಾನದಾರ, ಮಹ್ಮದ್‌ಖುರೇಶಿ ಮನಿಯಾರ, ಮುನ್ನಾ ಮಿರ್ಜಿ, ಇರ್ಫಾನ ಮನಿಯಾರ, ಹಾಜಿ.ಅಬ್ದುಲ್‌ಗನಿ ಕುಬಸದ, ಮಹ್ಮದ್‌ಗೌಸ ಕುಬಸದ, ಹುಮಾಯೂನ್ ಮಾಗಡಿ, ಗೌಸುಸಾಬ ಮುಳಗುಂದ. ಕಾಶೀಮಶಾ ಮಕಾನದಾರ, ಎ.ಎ.ಅತ್ತಾರ, ಸುಭಾನಸಾಬ ಒಂಟಿ, ಸಿಕಂದರ ಟಪಾಲ, ಬುಡನ್‌ಶಾ ಮಕಾನದಾರ, ಮಹ್ಮದ್‌ಇಸಾಕ ಆದ್ರಳ್ಳಿ, ಆಶ್ರತ ಢಾಲಾಯತ, ಎಂ.ಎ. ಮಕಾನದಾರ ಬಾಬುಸಾಬ ಮಾಚೇನಹಳ್ಳಿ, ನಜೀರ ಡಂಬಳ. ರಶೀದ ಢಾಲಾಯತ, ಗೌಸಪೀರ ಮಕಾನದಾರ, ಶೌಕತಲಿ ಮನಿಯಾರ, ಸಲೀಂ ಬಾಂಬೆ, ಇತರರಿದ್ದರು.