ಜಿಲ್ಲೆ

ಶ್ರದ್ಧಾಭಕ್ತಿಯ ಪೂಜಾ ಮಹೋತ್ಸವ

ಸಿದ್ದಾಪುರ: ಪಾಲಿಬೆಟ್ಟದ ಶ್ರೀಪೂಜಮ್ಮ ಮತ್ತು ನಾಗದೇವತೆಯ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಇತ್ತೀಚೆಗೆ ನೆರವೇರಿತು.

ಬೆಳಗ್ಗೆಯಿಂದ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಶಂಕರ ನಾರಾಯಣ ವೈಲಾಯ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹೋಮ, ಆಶ್ಲೇಷ ಬಲಿ, ದುರ್ಗಾ ನಮಸ್ಕಾರ, ಪುಷ್ಪಾರ್ಚನೆ, ಮಹಾಪೂಜೆ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನೆರೆವೇರಿತು.

ದೇವಾಲಯ ಸಮಿತಿಯ ನೇತೃತ್ವದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.