ಜಿಲ್ಲೆ

ಮಕ್ಕಳ ಕಣ್ಣೆದುರಲ್ಲೇ ಕೆರೆಗೆ ಬಿದ್ದು ತಂದೆ ಮೃತ್ಯು

ಕಾಸರಗೋಡು: ಮಕ್ಕಳೊಂದಿಗೆ ಕೆರೆಗೆ ಸ್ನಾನಕ್ಕಿಳಿದ ತಂದೆ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಕೋಳಿಯಡ್ಕ ನಿವಾಸಿ ಎಂ.ಎ ಅಹಮ್ಮದ್ ಶಮೀಂ(42)ಮೃತಪಟ್ಟವರು. ಅವರು ತಮ್ಮ ಮಕ್ಕಳೊಂದಿಗೆ ಸ್ನಾನ ಮಾಡಲು ಸಾರ್ವಜನಿಕ ಕೆರೆಗೆ ಇಳಿದಾಗ ಆಯತಪ್ಪಿ ಕೆರೆಗೆ ಬಿದ್ದರು ಎನ್ನಲಾಗಿದೆ.

ಮಕ್ಕಳು ಬೊಬ್ಬಿಟ್ಟಾಗ ತಕ್ಷಣ ಧಾವಿಸಿದ ಆಸುಪಾಸಿನ ಜನರು, ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ.