ಜಿಲ್ಲೆ

ಹಳ್ಳದಲ್ಲಿ ಕೊಚ್ಚಿ ಹೋದ ರೈತ ಸಾವು

ಸುಭಾಸ ಹೆಗಡೆ ಧೂಪದಹೊಂಡ

ಅಂಕೋಲಾ: ಕೃಷಿ ಕೆಲಸಕ್ಕೆ ತೆರಳಿದ್ದ ರೈತ ಕಾಲು ಜಾರಿ ಹಳ್ಳಕ್ಕೆ ಬಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ತಾಲೂಕಿನ ಬೊಗ್ರಿಬೈಲ್​ನಲ್ಲಿ ಭಾನುವಾರ ನಡೆದಿದೆ. ತಾಲೂಕಿನ ಬಾಳೇಗುಳಿ ನಿವಾಸಿ ಸುನೀಲ ಶಂಕರ ಗೌಡ (35) ಮೃತಪಟ್ಟ ವ್ಯಕ್ತಿ. ಇವರು ಆ. 6ರಂದು ಬೆಳಗ್ಗೆ ಬೊಗ್ರಿಬೈಲ್​ನಲ್ಲಿ ಭತ್ತದ ನಾಟಿ ಕೆಲಸಕ್ಕೆ ಹೋದ ವೇಳೆ ಅವಘಡ ನಡೆದಿದೆ. ಈ ಕುರಿತು ಸಂದೀಪ ಶಂಕರ ಗೌಡ ಪೊಲೀಸ್ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಉದಯ ಕುಂಬಾರ, ಕಂದಾಯ ನಿರೀಕ್ಷಕ ಸಂತೋಷ ಯಳಗದ್ದೆ, ಪಿಎಸ್​ಐ ಮಹಾಂತೇಶ ವಾಲ್ಮೀಕಿ ಭೇಟಿ ನೀಡಿ ಪರಿಶೀಲಿಸಿದರು.