ವಿಟ್ಲ: ಸಹಕಾರಿ ಸಂಘದ ಸಾಲ ಬಾಧೆ ತಾಳಲಾರದೆ ರೈತ, ಇಡ್ಕಿದು ಬಂಗೇರಕೋಡಿ ನಿವಾಸಿ ವೀರಪ್ಪ ಗೌಡ(55) ಎಂಬುವರು ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘವೊಂದರಿಂದ ಸಾಲ ತೆಗೆದುಕೊಂಡಿದ್ದು, ಮರುಪಾವತಿಸುವಂತೆ ನೋಟಿಸ್ ಬಂದಿತ್ತು. ಸಾಲ ಪಾವತಿಸದಿದ್ದರೆ ಜಮೀನು ಹರಾಜು ಹಾಕುವುದಾಗಿ ಸೊಸೈಟಿ ಮ್ಯಾನೇಜರ್ ಹಾಗೂ ಸಿಬ್ಬಂದಿ ಹಲವು ಬಾರಿ ತಿಳಿಸಿದ್ದರಿಂದ ಮಾನಸಿಕವಾಗಿ ನೊಂದು ಮನೆ ಪಕ್ಕದ ಜಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.