ಜಿಲ್ಲೆ

ಕಾಡುಪ್ರಾಣಿ ಹಾವಳಿ ತಡೆಗೆ ದೂರಗಾಮಿ ಯೋಜನೆ

Avinash R

ಕಾಸರಗೋಡು: ಜಿಲ್ಲೆಯ ಹತ್ತಕ್ಕೂ ಅಧಿಕ ಪಂಚಾಯಿತಿಗಳಲ್ಲಿ ಚಿರತೆ ಸೇರಿದಂತೆ ವನ್ಯಮೃಗ ಹಾವಳಿ ವ್ಯಾಪಕಗೊಂಡಿದ್ದು, ಈ ಬಗ್ಗೆ ನಿರ್ಲಕ್ಷೃ ಧೋರಣೆ ಕೈಬಿಟ್ಟು ದೂರಗಾಮಿ ಯೋಜನೆ ರಚಿಸಲು ಸರ್ಕಾರ ತಯಾರಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆಗ್ರಹಿಸಿದ್ದಾರೆ.

ಕೇರಳದಲ್ಲಿ ಆನೆ, ಹುಲಿ, ಚಿರತೆ, ಕಾಡುಹಂದಿ ಮುಂತಾದವುಗಳಿಂದ ನಾಗರಿಕರ ಬದುಕು ದುಸ್ತರವಾಗಿದೆ. ಕಾಸರಗೋಡು ಜಿಲ್ಲೆಯ ಬೋವಿಕ್ಕಾನ, ಬೇಡಡ್ಕ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಹಾಡಹಗಲು ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಅಪಾಯ ವಲಯದಲ್ಲಿ ವಾಸಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವನ್ಯಮೃಗ ಹಾವಳಿ ತಡೆಗಟ್ಟಲು ದೇಶದ ಉತ್ತರದ ರಾಜ್ಯಗಳು ಕೈಗೊಳ್ಳುತ್ತಿರುವಂತಹ ಆಧುನಿಕ ಯೋಜನೆಗಳನ್ನು ಕೇರಳದಲ್ಲೂ ಅಳವಡಿಸಿಕೊಳ್ಳುವ ಮೂಲಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಜೀವನ ಸಾಗಿಸುತ್ತಿರುವ ಜನತೆಯ ಬದುಕಿಗೆ ಭದ್ರತೆ ಒದಗಿಸಬೇಕಾದುದು ಸರ್ಕಾರದ ಕರ್ತವ್ಯ ಎಂದು ಎಂ.ಎಲ್.ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.