* ರಾಸಾಯನಿಕ ಬಣ್ಣ ಬಳಸಿಲ್ಲ
* ಪರಿಸರ ಸ್ನೇಹಿ ಮೂರ್ತಿಗೆ ವಾಟರ್ ಪೇಯಿಂಟ್ ಬಳಕೆ
ಎಂ.ಎಸ್.ಸಿದ್ದಲಿಂಗೇಶ್ವರ್ ಮಾಗಡಿ
ಕಲಾವಿದನಿಗೆ ಶ್ರದ್ಧೆ, ಶ್ರಮದ ಜತೆಗೆ ಕಲ್ಪನೆ ಇದ್ದಾಗ ಮಾತ್ರ ಅಂದುಕೊಂಡ ರೀತಿಯಲ್ಲಿ ಕಲೆಗೆ ಜೀವ ತುಂಬಲು ಸಾಧ್ಯ ಎಂಬುದಕ್ಕೆ ಮಾಗಡಿಯ ಕಲಾವಿದರ ಕುಟುಂಬವೊಂದು ಸಾಯಾಗಿದೆ.
ಮಾಗಡಿಯ ಪಟ್ಟಣದ ಕುಂಬಾರ ಬೀದಿಯ ದಿ. ಮಲ್ಲಣ್ಣ ಅವರ ಕುಟುಂಬ 94 ವರ್ಷಗಳಿಂದ ಪರಿಸರ ಗಣೇಶ ಮೂರ್ತಿಗಳನ್ನು ನಿರ್ಮಿಸುವುದರಲ್ಲಿ ಎತ್ತಿದ ಕೈ. ಕುಟುಂಬದ ಹಿರಿಯ ಪುತ್ರ ಮಂಜಣ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸತರಾಗಿದ್ದರು. ಅವರ ಅಕಾಲಿಕ ನಿಧನದ ನಂತರ ಅವರ ಸೋದರ ಗಣೇಶ್ ಮತ್ತು ನಂಜುಂಡಸ್ವಾಮಿ ವಿವಿಧ ರೂಪಗಳ ಗಣೇಶ ಮೂರ್ತಿಗಳನ್ನು ಮಾಡುವುದಲ್ಲಿ ನಿಸ್ಸೀಮರೆನಿಸಿಕೊಂಡಿದ್ದಾರೆ.
ಮಲ್ಲಣ್ಣ ಕುಟುಂಬ ಮೊದಲಿನಿಂದಲೂ ಜೇಡಿಮಣ್ಣಿನಿಂದಲೇ ಗಣೇಶ ಮೂರ್ತಿಗಳನ್ನು ಮಾಡುತ್ತಿದೆೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ ಪರಿಸರಕ್ಕೆ ಹಾನಿಯಾಗದ ವಾಟರ್ ಪೇಯಿಂಟ್ ಬಳಸಿ ಗಣೇಶ ಮೂರ್ತಿಯ ಅಂದ ಹೆಚ್ಚಿಸುತ್ತಾರೆ. ತಾಲೂಕಿನ ವಿಶ್ವನಾಥ ಪುರ, ಕಲ್ಯಾ, ಬಿಸ್ಕೂರು ಕೆರೆಯಿಂದ ಲೋಡ್ ಗಟ್ಟಲೆ ಜೇಡಿ ಮಣ್ಣು ತಂದು ಬಸವ ಜಯಂತಿಯಂದು ಸಂಪ್ರದಾಯಬದ್ಧವಾಗಿ ಜೇಡಿಮಣ್ಣಿಗೆ ಪೂಜೆ ಮಾಡಿ ಅದೇ ದಿನ ಗೌರಿ, ವ್ನಿ ವಿನಾಯಕನ ಸಣ್ಣ ಮೂರ್ತಿಯನ್ನು ಸಾಂಕೇತಿಕವಾಗಿ ಮಾಡಿ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವುದನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ.
ಅರ್ಧಅಡಿಯಿಂದ ಎರಡು ಅಡಿವರೆಗಿನ ಮೂರ್ತಿಗಳನ್ನು ಅಚ್ಚುಗಳ ಮೂಲಕವೇ ತಯಾರಿಸುತ್ತಾರೆ. ಮೂರು ಅಡಿಗಿಂತ ಎತ್ತರದ ಮೂರ್ತಿಗಳನ್ನು ಕೈಯಿಂದಲೇ ಮಾಡುತ್ತಾರೆ. ವರ್ಷದಲ್ಲಿ 4 ರಿಂದ 5 ತಿಂಗಳು ಈ ಗಣಪ ಮೂರ್ತಿ ಮಾಡುವ ಕುಟುಂಬ ಆ ನಂತರ ಗೋಪುರಗಳ ಮೂರ್ತಿ ಮತ್ತು ಬಣ್ಣ ಮಾಡುವುದರತ್ತ ಹೆಚ್ಚು ಗಮನ ಹರಿಸುತ್ತದೆ.
ಕಾಂತಾರ, ರಾಮಲಲ್ಲಾ, ಅಯ್ಯಪ್ಪ, ಇಡುಗುಂಜಿ, ರಾಜಸ್ಥಾನ ದುಗ್ರೀ, ದರ್ಬಾರ್, ಸ್ಟಾಪ್ ರೇಪ್, ಪರಶುರಾಮ, ಸ್ಕೂಲ್ ಮಾಸ್ಟರ್, ಸಿದ್ದಿವಿನಾಯಕ, ಸೌತಡ್ಕ, ಮಾಗಡಿ ಚೌತಿ, ನವಿಲು ಗಣಪತಿ, ಬಾಂಬೆ ಗಣಪತಿ, ಸುಬ್ರಹ್ಮಣ್ಯ, ಅಭಿಷೇಕ ಗಣಪತಿ ಸೇರಿ ಹಲವು ರೂಪದಲ್ಲಿ ಗಣಪತಿ ಮೂರ್ತಿಗಳನ್ನು ಮಲ್ಲಣ್ಣರ ಮಗ ಎಂ. ಗಣೇಶ್, ರೇಖಾ, ನಂಜುಂಡಸ್ವಾಮಿ, ಗಿರೀಶ್, ಮತ್ತು ಹೇಮಂತ್ ಕುಮಾರು, ತೇಜ ಸೋದರರು ತಯಾರಿಸಿದ್ದಾರೆ. ಹಲವು ಗಣಪಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ತಯಾರಾಗಿ ನಿಂತಿವೆ.ಈ ಬಾರಿ ಕಾಂತಾರ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದಕ್ಕೆ ಕಾಂತಾರ ಗಣಪತಿ, ದೇಶದಲ್ಲಿ ಮಹಿಳೆಗೆ ರಕ್ಷಣೆ ನೀಡುವ ರೀತಿಯ ಮಾದರಿಯಲ್ಲಿ ಸ್ಟಾಪ್ ರೇಪ್ ಗಣಪತಿ ಎಲ್ಲರ ಆಕರ್ಷಣೆಯಾಗಿದ್ದು, ಈ ಗಣಪನನ್ನು ನೋಡಲು ಸಾಕಷ್ಟು ಮಂದಿ ಮುಗಿಬೀಳುತ್ತಿರುವುದರಿಂದ ಗಣಪತಿ ತಯಾರಿಸಲು ಕಷ್ಟವಾಗುತ್ತಿದೆ ಎಂಬುದು ಕಲಾವಿದರ ಮಾತಾಗಿದೆ.
ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ. ಸರ್ಕಾರ ಪಿಒಪಿ ಗಣಪತಿ ಪ್ರತಿಷ್ಠಾಪನೆ ರದ್ದು ಮಾಡಿದರೂ ಕದ್ದು ಮುಚ್ಚಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಶ್ರಮಜೀವಿಗಳಾದ ನಮಗೆ ತೊಂದರೆಯಾಗಿದೆ. ಸರ್ಕಾರದಿಂದ ಯಾವುದೇ ನೆರವು ನೀಡಿಲ್ಲ, ಪ್ರಶಸ್ತಿಯೂ ಇಲ್ಲ, ಕಲಾವಿದರಿಗೆ ಪ್ರಶಸ್ತಿ ಎನ್ನುವುದು ದೊಡ್ಡ ಸಂಪತ್ತು ಇದ್ದಂತೆ, ನಿವೇಶನದ ಬಗ್ಗೆ ಶಾಸಕರಿಗೆ ಸಾಕಷ್ಟು ಮನವಿ ಮಾಡಿದರೂ ಸ್ಪಂದನೆ ದೊರಕಿಲ್ಲ. > ಕಲಾವಿದ ಎಂ. ಗಣೇಶ್.ಕಲಾವಿದರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಬೇಕು, ಗಣಪತಿ ತಯಾರಿಕೆಗೆ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ನೀಡಿ ನಮ್ಮಂತಹ ಕುಟುಂಬಗಳಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು. > ಹೇಮಂತ್ ಕುಮಾರ್ & ಕಲಾವಿದ.ಮಳೆ ಉತ್ತಮವಾಗಿ ಆಗಿರುವುದರಿಂದ ಕೆರೆಗಳಲ್ಲಿ ನೀರು ತುಂಬಿ ಜೇಡಿಮಣ್ಣು ಸಿಗುತ್ತಿಲ್ಲ. ಸಂಕಷ್ಟದ ನಡುವೆಯೂ ಕಸುಬನ್ನು ಉಳಿಸಿಕೊಂಡು ಬರಲಾಗಿದೆ. > ರೇಖಾ, ಕಲಾವಿದೆ