ರಬಕವಿ ಚಾವಡಿಗಲ್ಲಿಯ ರೇವಣಸಿದ್ಧೇಶ್ವರರ ಜಾತ್ರೆ ಸಂಭ್ರಮ ಸಡಗರದೊಂದಿಗೆ ನಡೆಯಿತು. 
ಜಿಲ್ಲೆ

ರಬಕವಿ ರೇವಣಸಿದ್ಧೇಶ್ವರರ ವೈಭವದ ಜಾತ್ರೆ

ರಬಕವಿ-ಬನಹಟ್ಟಿ: ರಬಕವಿ ಹಳೇ ಚಾವಡಿ ಗಲ್ಲಿಯಲ್ಲಿನ ರೇವಣಸಿದ್ಧೇಶ್ವರರ ಜಾತ್ರೆ ಗುರುವಾರ ವೈಭವದಿಂದ ನಡೆಯಿತು.

ಬೆಳಗ್ಗೆ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ನಂತರ ರೇವಣಸಿದ್ಧೇಶ್ವರರ ಬುತ್ತಿ ಪೂಜೆಯಲ್ಲಿ ಅರಳಿದ ಮೂರ್ತಿ ಭಕ್ತರ ಗಮನ ಸೆಳೆಯಿತು.

ನಂತರ ದೇವಸ್ಥಾನದ ಆವರಣದಲ್ಲಿ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಸೇವೆ, ಐದು ನೂರು ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ನಿಂಬೆಣ್ಣಪ್ಪ ಗುಣಕಿ, ಶ್ರೀಶೈಲ ಗುಣಕಿ, ಚನಬಸಪ್ಪ ವಿಜಾಪುರ, ಗಂಗಾಧರ ಉಕ್ಕಲಿ, ಮಹಾದೇವ ಪೂಜಾರಿ, ರಾಜು ಶಿರೋಳ, ಆನಂದ ಮಧುರಖಂಡಿ, ಶಂಭು ಉಕ್ಕಲಿ, ಲಿಂಗರಾಜ ಪೂಜಾರಿ, ಸಿದ್ದು ಉಕ್ಕಲಿ, ರವಿ ಜೀರಗಾಳ, ಧನುಷ್ಯ ಮಧುರಖಂಡಿ ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.