ಜಿಲ್ಲೆ

ಮೈಸೂರಿನಲ್ಲಿ ಗಂಧದ ಮರ ಕಳವಿಗೆ ವಿಫಲ ಯತ್ನ

ಮೈಸೂರು: ರಾಮಕೃಷ್ಣನಗರದ ರಸ್ತೆ ಬದಿಯಲ್ಲಿ ಬೆಳೆದಿದ್ದ ಗಂಧದ ಮರವನ್ನು ಕಳ್ಳರು ಬುಧವಾರ ಕಳ್ಳರು ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.

ಬಡಾವಣೆಯ ಎಚ್.ಬ್ಲಾಕ್‌ನ 8ನೇ ಕ್ರಾಸ್‌ನಲ್ಲಿದ್ದ ಗಂಧದ ಮರ ಕದಿಯುವ ಉದ್ದೇಶದಿಂದ ಕಳ್ಳರು ಬೀದಿ ದೀಪವನ್ನು ಆಫ್ ಮಾಡಿ ಮರ ಕತ್ತರಿಸಲು ಪ್ರಾರಂಭಿಸಿದರು. ಮರ ಕತ್ತರಿಸುವ ಶಬ್ದ ಕೇಳಿ ಬಡಾವಣೆಯ ನಿವಾಸಿಯೊಬ್ಬರು ಹೊರ ಬಂದು ಕೂಗಿಕೊಂಡ ಸಂದರ್ಭ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.