ಜಿಲ್ಲೆ

ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿ: ಮತಾಂತರಿಗಳಿಗೆ ಸರ್ಕಾರದ ಛಡಿ ಏಟು

arunakunigal

ಬೆಂಗಳೂರು: ವಿಪಕ್ಷಗಳ ವಿರೋಧದ ನಡುವೆಯೂ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

ಗುರುವಾರ ನಡೆದ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಅದರಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆಯೂ ಒಂದು. ಧರ್ಮ ಸಂಘರ್ಷದ ಹೊತ್ತಲ್ಲಿ ಮತ್ತೊಂದು ಸೂಕ್ಷ್ಮ ವಿಚಾರಕ್ಕೆ ಕೈ ಹಾಕಿರುವ ಸರ್ಕಾರ, ಮತಾಂತರಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

  • ಕ್ಯಾಬಿನೆಟ್​ ಸಭೆಯಲ್ಲಾದ ಪ್ರಮುಖ‌ ನಿರ್ಣಯಗಳು
  • ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ಅನುಮೋದನೆ.
  • ಟೌನ್ ಪ್ಲಾನಿಂಗ್ ಸಮಸ್ಯೆ ಪರಿಹಾರಕ್ಕೆ ಕಾನೂನು ರೀಪಿಲ್ ಪುರಸಭೆಯಲ್ಲಿ ಟೌನ್ ಪ್ಲಾನಿಂಗ್ ಅನುಮತಿ ಅನಿವಾರ್ಯವಾದಾಗ, ಖಾತೆ ಆಗುತ್ತಿರಲಿಲ್ಲ, ಎಸ್​ಒಸಿಗೆ ಸಮಸ್ಯೆ ಆಗುತ್ತಿತ್ತು. ಪುರಸಭೆ ಲಿಸ್ಟ್‌ನಲ್ಲಿರುವ ಆಸ್ತಿಗೆ ಇನ್ನು ಅನುಮತಿ ಕಡ್ಡಾಯವಲ್ಲ. ಗ್ರಾಮ ಪಂಚಾಯಿತಿಗೂ ಅನ್ವಯವಾಗಲ್ಲ. ಕಾನೂನು ರಿಪೀಲ್. ಹೊಸ ಲೇ ಔಟ್ ಮಾಡುವವರಿಗೆ ಟೌನ್ ಪ್ಲಾನ್ ಅಪ್ಲೇ ಆಗಲಿದೆ. ಕಾನೂನು ರೀಪಿಲ್​ಗೆ ಸಂಪುಟ ಅನುಮತಿ. ಜಿಪಿಎಸ್ ಅಡಿ ಬರುವವರಿಗೆ ಟೌನ್ ಪ್ಲಾನಿಂಗ್ ಅನುಮತಿ ಬೇಕಾಗುವುದಿಲ್ಲ.
  • ಅಟಲ್ ನಗರ ಪುನಶ್ಚೇತನ ಯೋಜನೆಗೆ 9327 ಕೋಟಿ ರೂ., 282 ನಗರ ಸೇರ್ಪಡೆ, ರಾಜ್ಯ, ಕೇಂದ್ರ, ಸ್ಥಳೀಯ ಸಂಸ್ಥೆ ಸಹಭಾಗಿತ್ವದ ಯೋಜನೆ.
  • ಅಕ್ರಮ‌ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಆರು ತಿಂಗಳು ಅವಕಾಶ
  • ಕರ್ನಾಟಕ ಸೈಬರ್ ಭದ್ರತಾ ನೀತಿ 2022-27ಕ್ಕೆ ಅನುಮೋದನೆ. ಸೈಬರ್ ನೀತಿ ರಕ್ಷಣೆ
  • ಕರ್ನಾಟಕ ಖಾಸಗಿ ಭದ್ರತಾ ಸಂಸ್ಥೆಗಳ‌ ನಿಯಮಕ್ಕೆ ಅನುಮೋದನೆ, ಕೇಂದ್ರದ ರೀತಿ ಅನುಷ್ಠಾನ.
  • ಹಿಮೋ ಫೀಲಿಯಾ ಖಾಯಿಲೆಗೆ ಉಚಿತವಾಗಿ ಔಷಧ, ಔಷಧ ಖರೀದಿಗೆ 29 ಕೋಟಿ ರೂ. ಅನುದಾನ
  • ಸಾಮಾನ್ಯ ಸೇವಾ ವಾಹನ ನೇಮಕ ನಿಯಮ ತಿದ್ದುಪಡಿ, ಇನ್ ಸರ್ವಿಸ್‌ನಲ್ಲಿದ್ದವರಿಗೆ ಅರ್ಹರಿದ್ದರೆ ಶೇ. 5 ಬಡ್ತಿ, ಒಂದು ಬಾರಿಗೆ ಅವಕಾಶ.
  • ಮೈಸೂರು ಆಂಜನೇಯ ದೇವಾಲಯ ಉತ್ತರಾಧಿ ಮಠಕ್ಕೆ
  • ಯಾದವ ಸಮಾಜಕ್ಕೆ ಮೂರು ಎಕರೆ ಜಾಗ
  • ಭದ್ರಾ ಮೇಲ್ದಂಡೆಯಿಂದ ಕುಡಿಯುವ ನೀರಿನ ಯೋಜನೆಗೆ, ಹೊಸದುರ್ಗ ತಾಲೂಕಿಗೆ ನೀರು ಕೊಡಲು 1820 ಕೋಟಿ ರೂ., ಹರಿಹರ ಹೊನ್ನಾಳಿ ಕುಡಿಯುವ ನೀರಿನ ಯೋಜನೆಗೆ‌ ಅನುಮೋದನೆ.
  • ಸ್ವಚ್ಛ ಭಾರತಕ್ಕೆ ಸಣ್ಣ ಮುನಿಸಿಪಾಲಿಟಿ ಸೇರ್ಪಡೆ, 3 ಸಾವಿರ ಕೋಟಿ ರೂ. ಯೋಜನೆಗೆ ಅನುಮೋದನೆ.
  • ಹಳೇ ಏರ್ ಪೋರ್ಟ್ ರಸ್ತೆಯಿಂದ ಸಿಗ್ನಲ್ ಫ್ರೀ ಕಾರಿಡಾರ್‌ ನಿರ್ಮಾಣಕ್ಕೆ 150 ಕೋಟಿ ರೂ.
  • ಕೆಂಗಲ್- ದಶಾವತಾರ- ಕಣ್ವ ಅಣೆಕಟ್ಟೆ ರಸ್ತೆಗೆ 28 ಕೋಟಿ ರೂ.
  • ಉಡುಪಿಯಲ್ಲಿ ತಡೆ ಅಣೆಕಟ್ಟೆ ನಿರ್ಮಾಣಕ್ಕೆ 165 ಕೋಟಿ ರೂ.
  • ದೇವದುರ್ಗ ತಾಲೂಕು 28 ಕೆರೆ ತುಂಬಿಸಲು 330 ಕೋಟಿ ರೂ. ... ಇತ್ಯಾದಿ