ಜಿಲ್ಲೆ

ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ: ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ, 27 ಸಾವಿರ ಅತಿಥಿ ಶಿಕ್ಷಕರ ನೇಮಕ

arunakunigal

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಂಡಿಸಿದ ಚೊಚ್ಚಲ ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು 31,980 ಕೋಟಿ ರೂ. ಅನುದಾನ ನೀಡಿದ್ದು, ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

  • ನೀಟ್​ ಪರೀಕ್ಷೆ ಎದುರಿಸಲು ಬಡಮಕ್ಕಳಿಗೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ತರಬೇತಿ
  • 30 ಸರ್ಕಾರಿ ಐಟಿಐಗಳು ಹಾಗೂ ಆಯ್ದ ಪಾಲಿಟೆಕ್ನಿಕ್​ಗಳನ್ನು ಪಿಪಿಪಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವುದು
  • ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಯೋಜನೆಯಡಿಯಲ್ಲಿ ನೀಟ್​, ಜೆಇಇ, ಕೆಪಿಎಸ್​ಸಿ, ಯುಪಿಎಸ್​ಸಿ, ಎಸ್​ಎಸ್​ಸಿ, ಬ್ಯಾಂಕಿಂಗ್​, ರೈಲ್ವೆ, ಸಿಡಿಎಸ್​ ಪರೀಕ್ಷಾ ಆಕಾಂಕ್ಷಿಗಳಿಗೆ ಆನ್​ಲೈನ್​ ಮೂಲಕ ಉಚಿತ ಕೋಚಿಂಗ್​
  • ಹಿಂದುಳಿದ ವರ್ಗಗಳ ಯುವ ಜನರಿಗೆ ಐಟಿಐ, ಜಿಟಿಟಿಸಿ, ಕೆಜಿಟಿಟಿಐಗಳಲ್ಲಿ ಅಲ್ಪಾವಧಿ ಕೋರ್ಸ್​ಗಳ ಮೂಲಕ ಕೌಶಲ ತರಬೇತಿ ನೀಡಲು "ಅಮೃತ ಮುನ್ನಡೆ' ಯೋಜನೆ ಜಾರಿ
  • ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ.
  • ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್​ ಕಾಲೇಜುಗಳನ್ನು 'ಕನಾಟಕ ಇನ್​ಸ್ಟಿಟ್ಯೂಟ್​ ಆಫ್​​ ಟೆಕ್ನಾಲಜಿ'ಯನ್ನಾಗಿ ಮೇಲ್ದರ್ಜೆಗೆ
  • ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ 15 ಸಾವಿರ ಶಿಕ್ಷಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ 27 ಸಾವಿರ ಅತಿಥಿ ಶಿಕ್ಷಕರ ನೇಮಕ
  • ಚಾಮರಾಜನಗರ, ಬೀದರ್​, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ ಹಾಗೂ ಹಾಸನದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಿವಿ ಸ್ಥಾಪನೆ
  • 200ಕ್ಕೂ ಅಧಿಕ ಒಳರೋಗಿ ಸಾಮರ್ಥ್ಯವಿರುವ ಜಿಲ್ಲಾಸ್ಪತ್ರೆಗಳಲ್ಲಿ ಬೋಧನಾ ಆಸ್ಪತ್ರೆಗಳಾಗಿ ರೂಪಿಸುವುದು. ಈ ವರ್ಷ ತುಮಕೂರುಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಿಜಿ ಕೋರ್ಸ್​ ಆರಂಭ
  • ಹಾವೇರಿ ಜಿಲ್ಲೆ ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ
  • ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ
  • ರಾಮನಗರದ ಅರ್ಚಕರಹಳ್ಳಿ ಗ್ರಾಮದಲ್ಲಿ ಉದ್ದೇಶಿತ ಆರೋಗ್ಯ ವಿವಿಯ ಕ್ಯಾಂಪಸ್​ ಸ್ಥಾಪನೆಗೆ 600 ಕೋಟಿ ರೂ. ಅನುದಾನ
  • 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ತಯಾರಿಸಿದ 'ಲ್ಯಾಬ್​ ಇನ್​ ಎ ಕಿಟ್​' ವಿತರಣೆ
  • ಬೆಂಗಳೂರಲ್ಲಿ ಆಯ್ದ 20 ಶಾಲೆಗಳನ್ನು ಬೆಂಗಳೂರು ಪಬ್ಲಿಕ್​ ಶಾಲೆಗಳಾಗಿ ಅಭಿವೃದ್ಧಿ
  • ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ರಾಜ್ಯಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ
  • ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ವಸತಿ ಶಾಲೆಗಳಿಗೆ 'ಎಪಿಜೆ ಅಬ್ದುಲ್​ ಕಲಾಂ ವಸತಿ ಶಾಲೆ' ಎಂದು ಮರು ನಾಮಕರಣ
  • ಮಂಗಳೂರು ವಿವಿಯಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪನೆ
  • ಶಿವಮೊಗ್ಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆ
  • ರಾಯಚೂರು ವಿವಿಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ 15 ಕೋಟಿ ರೂ.