ಜಿಲ್ಲೆ

ಮಾದಕ ವ್ಯಸನ ಮುಕ್ತ ಜೀವನ ಸುಂದರ

ಮರಿದೇವ ಹೂಗಾರ

ಹುಬ್ಬಳ್ಳಿ: ಆಡಳಿತ ಮಂಡಳಿಯ ಸಹಯೋಗದಲ್ಲಿ ಇಲ್ಲಿಯ ಅಂಜುಮನ್ ಇ- ಇಸ್ಲಾಂ ಸಂಸ್ಥೆಯ ಆಂಗ್ಲೋ ಉರ್ದು ಬಾಲಕಿಯರ ಪದವಿಪೂರ್ವ ಕಾಲೇಜ್‌ನಲ್ಲಿ ವಿಶ್ವ ಮಾದಕವಸ್ತು ವಿರೋಧಿ ದಿನವನ್ನು ಬುಧವಾರ ಏರ್ಪಡಿಸಲಾಗಿತತು.
ಹಳೇ ಹುಬ್ಬಳ್ಳಿ ಠಾಣೆ ಪಿಎಸ್‌ಐ ರುದ್ರಪ್ಪ ಗುಡಧಾರಿ ಅವರು ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಯಾವುದೇ ನಿಗದಿತ ಗುರಿ ತಲುಪಲು ಸಾಧ್ಯವಿಲ್ಲ. ಮಾದಕ ವ್ಯಸನ ಮುಕ್ತ ಜೀವನ ಸುಂದರವಾಗಿರಲಿದೆ ಎಂದರು.
ಪ್ರಾಚಾರ್ಯ ಸೈಯದ್ ನಸೀಮಾ ಫಾತಿಮಾ ಅಧ್ಯಕ್ಷತೆ ವಹಿಸಿದ್ದರು.
ಜಾವಿದ್ ಅಹ್ಮದ್ ಖತೀಬ ನಿರೂಪಿಸಿದರು. ನೂರ್ ಅಹ್ಮದ್ ಹವಾಲ್ದಾರ ವಂದಿಸಿದರು.