ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಗ್ರಾಮದ ಹೊರವಲಯದಲ್ಲಿ ಮಿಠಾಯಿ ಬಿ. ಬಾಲಚಂದ್ರ ಅವರ ನಾಯಿಯನ್ನು ಶುಕ್ರವಾರ ರಾತ್ರಿ ಚಿರತೆ ತಿಂದು ಓಡಾಡಿರುವ ಚಿರತೆ ಪಾದದ ಹೆಜ್ಜೆ ಗುರುತು. 
ಜಿಲ್ಲೆ

ಚಿರತೆ ದಾಳಿಗೆ ನಾಯಿ ಬಲಿ

ಲೋಕೇಶ್ ಮನು. ಡಿ

ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ಚಿರತೆ ಸಾಕು ನಾಯಿ ತಿಂದು ಹಾಕಿದೆ. ಗ್ರಾಮದ ಮಿಠಾಯಿ ಬಿ.ಬಾಲಚಂದ್ರ ತೋಟದಲ್ಲಿ ಕೃಷಿ ಜತೆಗೆ ಮಿಠಾಯಿ ತಯಾರಿಕೆ ಮಾಡಲು ತೋಟದ ಮನೆ ನಿರ್ಮಿಸಿಕೊಂಡಿದ್ದರು. ಇಲ್ಲಿ ಇವರ ತಂದೆ ಬಸವಶೆಟ್ಟಿ ರಾತ್ರಿ ವೇಳೆ ಮಲಗುತ್ತಿದ್ದರು.


ಎಂದಿನಂತೆ ನಾಯಿಯನ್ನು ತೋಟದ ಮನೆ ಮುಂದೆ ಕಟ್ಟಿಹಾಕಿದ್ದರು. ತಡರಾತ್ರಿಯಲ್ಲಿ ಚಿರತೆ ತೋಟಕ್ಕೆ ನುಗ್ಗಿ ಕಟ್ಟಿಹಾಕಲಾಗಿದ್ದ ನಾಯಿಯನ್ನು ತಿಂದು ತಲೆ ಬಿಟ್ಟು ಹೋಗಿದೆ. ಬೆಳಗ್ಗೆ ನಾಯಿ ಶಬ್ದವಿಲ್ಲದಿರುವುದನ್ನು ಕಂಡು ನೋಡಿದಾಗ ವಿಷಯ ಗೊತ್ತಾಗಿದೆ.
ಸಿಸಿ ಕ್ಯಾಮರಾ ಫುಟೇಜ್ ನೋಡಲಾಗಿ ಚಿರತೆ ಬಂದಿರುವುದು ಕಂಡಿದೆ. ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.