ಜಿಲ್ಲೆ

ಗರ್ಭಚೀಲದ ಮೇಲಿನ ಗಂಟು ತೆಗೆದ ವೈದ್ಯರು

ಹುಬ್ಬಳ್ಳಿ: ಗರ್ಭಕೋಶ ಕಂಠದ ಸೈಬ್ರೈಡ್‌ನಿಂದ (ಗಂಟು) ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಇಲ್ಲಿಯ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಸೋಮವಾರ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.
ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಮಹಿಳೆ ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಪರೀಕ್ಷೆ ಮಾಡಿಸಿದಾಗ ಇವರು 20 ವರ್ಷದಿಂದ ಸೈಬ್ರೈಡ್‌ನಿಂದ ಬಳಲುತ್ತಿರುವುದು ಬಯಲಾಗಿದೆ.
ಅಲ್ಲದೆ ಗರ್ಭಕೋಶ ಚೀಲದ ಮೇಲೆ ಗಂಟು, ದೊಡ್ಡ ಕರಳಿನ ತೊಡಕು, ಎಂಡೋಮೆಟ್ರಾಯಿಸಿಸ್ ಗ್ರೇಡ್ 3 ಮತ್ತು 4, ರಕ್ತ ಹೀನತೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ಕೂಡಲೆ ಲ್ಯಾಪ್ರೋಸ್ಕೋಪಿಕ್ ಎಕ್ಸ್‌ಪ್ಲೋರೇಷನ್ ವಿತ್ ಹಿಸ್ಟರಾಕ್ಟಮಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಈಗ ಮಹಿಳೆಯ ಆರೋಗ್ಯದಿಂದ ಇದ್ದಾರೆ ಎಂದು ಡಾ. ಶ್ರೀಧರ ದಂಡಪ್ಪನವರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.