ಜಿಲ್ಲೆ

ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ NSUI ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದ ಡಿಕೆಶಿ

arunakunigal

ತುಮಕೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಸಂಬಂಧ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ರ ಮನೆಗೆ ಮುತ್ತಿಗೆ ಹಾಕಿದ ಪ್ರಕರಣ ಸಂಬಂಧ 22 NSUI ಕಾರ್ಯಕರ್ತರನ್ನು ಬಂಧಿಸಿ ತಮಕೂರಿನ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿದೆ. ಇವರ ಆರೋಗ್ಯ ವಿಚಾರಿಸಲು ಶನಿವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಕುಣಿಗಲ್​ ಶಾಸಕ ಎಚ್​.ಡಿ.ರಂಗನಾಥ್​, ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಪಕ್ಷದ ಕೆಲ ಮುಖಂಡರು ಜೈಲಿಗೆ ಆಗಮಿಸಿದರು.

ತುಮಕೂರಿನ ಹೊರವಲಯದ ಊರುಕೆರೆಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಕಾಂಗ್ರೆಸ್​ ನಾಯಕರು ಬಂಧಿತ NSUI ಕಾರ್ಯಕರ್ತರಿಗೆ ಹಣ್ಣು ವಿತರಿಸಿ ಆರೋಗ್ಯ ವಿಚಾರಿಸಿದರು.