ವಿಜಯಪುರ:ಇಬ್ರಾಹಿಂಪುರ ಬಳಿಯ ಗುರುಪಾದೇಶ್ವರ ನಗರದಲ್ಲಿನ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ಜು. 30 ರಿಂದ ಆ. 22 ರವರೆಗೆ ಶ್ರಾವಣ ಮಾಸದ ನಿಮಿತ್ತ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಜು. 30 ರಂದು ಸಂಜೆ 6 ಗಂಟೆಗೆ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಡಿವೈಎಸ್ಪಿ ಬಸವರಾಜ ಯಲಿಗಾರ ನೆರವೇರಿಸುವರು. ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಮ್ಮುಖ ವಹಿಸುವರು. ಉದ್ಯಮಿ ಎಸ್.ಎಚ್. ನಾಡಗೌಡ ಅವರನ್ನು ಸನ್ಮಾನಿಸಲಾಗುವುದು.
ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಟಕದ ಉಪಾಧ್ಯಕ್ಷೆ ಶಶಿಕಲಾ ಕೊಟಗಿ ಉಪಸ್ಥಿತಿ ವಹಿಸುವರು.
ನಿತ್ಯವೂ ಸಂಜೆ 6.30 ರಿಂದ ರಾತ್ರಿ 8 ರವರೆಗೆ ಪ್ರವಚನ ನಡೆಯಲಿದ್ದು, ಶೇಗುಣಿಸಿ ವಿರಕ್ತಮಠದ ಮಹಾಂತ ಪ್ರಭು ಸ್ವಾಮೀಜಿಗಳು "ಕಲ್ಯಾಣದ ಶರಣರ ಚರಿತಾಮೃತ ದರ್ಶನ' ವಿಷಯದ ಕುರಿತು ಪ್ರವಚನ ನೀಡುವರು. ಗಾಯಕ ಅಮರೇಶ ಚಿಕ್ಕ ಕೊಟ್ನಿಕಲ್ಲ ಸಂಗೀತ ಹಾಗೂ ಹಣಮಂತ ಚಿಕ್ಕಕೊಟ್ನಿಕಲ್ಲ ತಬಲಾ ಸಾಥ್ ನೀಡುವರು. ಪ್ರವಚನದ ಬಳಿಕ ನಿತ್ಯ ದಾಸೋಹ ನೆರವೇರಲಿದೆ ಎಂದು ಮಂಟಪದ ಕಾರ್ಯದರ್ಶಿ ಎಸ್.ಕೆ. ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.