ರಾಯಚೂರು ನಿರಂತರವಾಗಿ ಸುರಿಯುತ್ತಿರು ವ ಮಳೆಯಿಂದಾಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಕಟ್ಟಡದ ಮೇಲ್ಟಾವಣಿ ಸಿಮೇಂಟ್ ಪದರು ಕುಸಿದು ಬಿದ್ದು ಭಾರೀ ಅನಾಹುತ ತಪ್ಪಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ನಗರದ ಕೇಂದ್ರ ಬಸ್ ನಿಲ್ದಾಣದ ಕಟ್ಟಡ ಮೇಲೆ ಮಳೆ ನೀರು ನಿಂತಿರುವ ಪರಿಣಾಮವಾಗಿ ಮೇಲ್ಟಾವಣಿಯ ಸಿಮೇಂಟ್ ಪದರು ಕುಸಿದು ಬಿದ್ದಿದೆ, ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಮೇಲೆ ಸಿಮೆಂಟ್ ಪದರು ಕಳಚಿ ಬಿದ್ದಿದೆ. ಈ ಸಮಯದಲ್ಲಿ ಪ್ರಯಾಣಿಕರು ಯಾರು ಇಲ್ಲದೇ ಇರುವುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಈ ಘಟನೆಯಿಂದಾಗಿ ಪ್ರಯಾಣಿಕರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.