ತಾಳಿಕೋಟೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಕೀರ್ತಿ ಚಾಲಕ ಮಾತನಾಡಿದರು. ಆರ್.ಎಲ್.ಕೊಪ್ಪದ, ಸುಜಾತಾ ಯಡ್ರಾಮಿ, ಆರ್.ಎಸ್.ಭಂಗಿ, ಜೆ.ಆರ್.ಜೈನಾಪೂರ ಇತರರಿದ್ದರು. 
ಜಿಲ್ಲೆ

ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲು ನಿರ್ಧಾರ

ತಾಳಿಕೋಟೆ: ಕನ್ನಡ ರಾಜ್ಯೋತ್ಸವ ನಿಮಿತ್ತ ತಾಲೂಕು ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲಾ ಕಾಲೇಜು ಹಾಗೂ ಕಚೇರಿಗಳಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ನ.1 ರಂದು ಬೆಳಗ್ಗೆ 8 ಗಂಟೆಗೆ ಪೂಜೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಕೀರ್ತಿ ಚಾಲಕ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ 87ನೇ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯೋತ್ಸವವನ್ನು ಅತ್ಯಂತ ಸಡಗರದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಬೆಳಗ್ಗೆ 8.45ಕ್ಕೆ ತಾಲೂಕ ಆಡಳಿತದಿಂದ ಸರ್ಕಾರಿ ಕನ್ನಡ ಶಾಲೆ ಮೈದಾನದಲ್ಲಿ ಪಟ್ಟಣದ ಎಲ್ಲ ಶಾಲಾ ಕಾಲೇಜು, ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಾಭಿಮಾನಿಗಳ ಸಹಯೋಗದೊಂದಿಗೆ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಧ್ವಜಾರೋಹಣ ನೆರವೇರಿಸಲಾಗುವುದು ಎಂದರು.

ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ: ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಕನ್ನಡಪರ ಸಂಘಟಕರು, ಕನ್ನಡಾಭಿಮಾನಿಗಳು ಒತ್ತಾಯಿಸಿದರು.

ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ತಾಪಂ ಕಚೇರಿಯ ಸುಜಾತಾ ಯಡ್ರಾಮಿ, ಪಿಎಸ್‌ಐ ಆರ್.ಎಸ್.ಭಂಗಿ, ಶಿರಸ್ತೇದಾರ ಜೆ.ಆರ್.ಜೈನಾಪೂರ, ಪುರಸಭೆ ಸದಸ್ಯ ಪರಶುರಾಮ ತಂಗಡಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಜೈಸಿಂಗ್ ಮೂಲಿಮನಿ, ಮೋಹನ ( ಮುದಕಪ್ಪ) ಬಡಿಗೇರ, ಗಣ್ಯರಾದ ಕಾಶಿನಾಥ ಮುರಾಳ, ಅಶೋಕ ಬಳಗಾನೂರ, ಅಶೋಕ ಶೆಟ್ಟಿ, ಪ್ರಕಾಶ ಹಜೇರಿ, ಪ್ರಭುಗೌಡ ಮದರಕಲ್, ಬಾಬು ಹಜೇರಿ, ಇಬ್ರಾಹಿಂ ಮನ್ಸೂರ್, ಕರವೇ ಸಂಘಟನೆಯ ಜೈಭೀಮ ಮುತ್ತಗಿ, ಸಿಆರ್‌ಸಿ ರಾಜು ವಿಜಾಪುರ, ಡಾ.ಅನೀತಾ ಸಜ್ಜನ, ಗೋಪಾಲ ಕಟ್ಟಿಮನಿ. ವೆಂಕೋಬ ನಾಯ್ಕೋಡಿ, ಮುನ್ನಾ ಅತ್ತಾರ, ಪುರಸಭೆ ಕಂದಾಯ ಅಧಿಕಾರಿ ಸುರೇಶ ಅಮರಣ್ಣವರ ಇತರರಿದ್ದರು.