ಎನ್.ಆರ್.ಪುರ: ವಿಶ್ವದಲ್ಲಿಯೇ ದೊಡ್ಡ ಲಿಖಿತ ಸಂವಿಧಾನ ಹೊಂದಿದ ದೇಶ ಭಾರತ ಎಂದು ತಹಸೀಲ್ದಾರ್ ತಜುನ.ಟಿ.ಸವದತ್ತಿ ಹೇಳಿದರು.
ಕುವೆಂಪು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ, ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆ ಶ್ರೇಷ್ಠವಾಗಿದೆ. ಪ್ರಜಾಪ್ರಭುತ್ವ ಜಾತ್ಯಾತೀತತೆ ಎತ್ತಿ ಹಿಡಿಯುತ್ತದೆ. ಭಾರತದ ಪ್ರಜಾಪ್ರಭುತ್ವದ ಹಿರಿಮೆ ಎತ್ತಿಹಿಡಿಯುವ ಈ ದಿನ ನಮಗೆ ವಿಶೇಷವಾದ ದಿನ. ಸರ್ವರಿಗೂ ಸಮಬಾಳು ಕಲ್ಪಿಸಲು ಪ್ರಬಲ ಲಿಖಿತ ಸಂವಿಧಾನದ ಅವಶ್ಯಕತೆ ಮನಗಂಡು, ಸ್ವಾತಂತ್ರ್ಯ ನಂತರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದ್ದರಿಂದ ನಾವು ಎಲ್ಲ ಹಕ್ಕುಗಳನ್ನು ಪಡೆದು, ಸ್ವತಂತ್ರ್ಯವಾಗಿ ಬದುಕುತ್ತಿದ್ದೇವೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ಎಲ್ಲ ಧರ್ಮದವರೂ ಸೌಹಾರ್ದಯುತವಾಗಿ ಬದುಕಲು ಸಂವಿಧಾನ ಪ್ರಮುಖವಾಗಿದೆ. ಸಂವಿಧಾನ ರಚನೆಯಾಗಿ ಇಂದಿಗೆ 76 ವರ್ಷವಾಗಿದೆ. ಸಂವಿಧಾನದಲ್ಲಿ ಉಲ್ಲೇಖಿಸಿರುವ ಹಕ್ಕುಗಳು, ಸಮಾನತೆಗಳಿಂದಾಗಿ ಸಮಾಜದ ಶೋಷಿತರು, ಬಡವರ್ಗದವರೂ ಸಮಾನತೆ ಪಡೆಯಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗನ್ನು ಸನ್ಮಾನಿಸಲಾಯಿತು. ಪಪಂಅಧ್ಯಕ್ಷೆ ಸುರಯ್ಯಬಾನು, ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಎನ್.ಎಲ್.ಮುಕುಂದ, ಜುಬೇದಾ ಮುನಾವರ್‌ಪಾಷಾ, ರಜಿ, ಸುಬ್ರಮಣ್ಯ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ವಾಲ್ಮೀಕಿ ನಾಯಕ ಸಂಘದ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್, ದಲಿತ ಮುಕುಂಡ ಎಚ್.ಎಂ.ಶಿವಣ್ಣ, ಡಿ.ರಾಮು, ಬಿಇಒಕೆ.ಆರ್.ಪುಷ್ಪಾ ಇದ್ದರು.