ಮೈಸೂರು: ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಶುರುವಾಗ ಜಗಳ ಒಬ್ಬರ ಸಾವಲ್ಲಿ ಅಂತ್ಯ ಕಂಡಿದೆ. ಸೊಸೆಗೆ ಚಾಕುವಿನಿಂದ ಚುಚ್ಚಿದ ಅತ್ತೆ, ನೇಣಿಗೆ ಕೊರಳೊಡ್ಡಿ ಪ್ರಾಣ ಬಿಟ್ಟಿದ್ದಾಳೆ.
ಮೈಸೂರಿನ ಬೋಗಾದಿಯಲ್ಲಿ ಬುಧವಾರ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಮಾದೇವಿ ಮತ್ತು ಸೊಸೆ ನಡುವೆ ಕಿತ್ತಾಟ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸೊಸೆಗೆ ಚಾಕುವಿನಿಂದ ಅತ್ತೆ ಇರಿದಿದ್ದಾಳೆ. ಸೋಸೆ ಜೋರಾಗಿ ಚೀರಾಡುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಹಾಗೂ ಹೊರಗಡೆಯಿದ್ದ ಮಗ ಓಡಿ ಬಂದು ಗಾಯಗೊಂಡ ವೇದಾವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.
ಈ ವೇಳೆ ಅತ್ತೆ ಮಾದೇವಿ(62) ಪೊಲೀಸರಿಗೆ ಹೆದರಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.