ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನವರಾತ್ರಿ ನಿಮಿತ್ತ ನಗರದ ಕುಸುಗಲ್ ರಸ್ತೆ ಶ್ರೀನಿವಾಸ ಗಾರ್ಡನ್ನಲ್ಲಿ ಕನ್ನಡದ ನಂ. 1 ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಬುಧವಾರ ರಾತ್ರಿ ಆಯೋಜಿಸಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ಜನರು ಉತ್ಸಾಹ-ಉಲ್ಲಾಸದಿಂದ ಪಾಲ್ಗೊಂಡಿದ್ದರು.
ಅಬ್ಬರದ ಸೌಂಡ್ ಹಾಗೂ ಬಣ್ಣ ಬಣ್ಣದ ಬೆಳಕಿನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಮಹಿಳೆಯರು, ಪುರುಷರು ಮತ್ತು ಮಕ್ಕಳು ಸಂಭ್ರಮಿಸಿದರು. ನಿಯೋನ್ ಥೀಮ್ ಈ ವಿಶೇಷ ದಾಂಡಿಯಾ ಕಾರ್ಯಕ್ರಮವು ಭಾಗವಹಿಸಿದವರಿಗೆ ಒಂದು ಮರೆಯಲಾಗದ ಅನುಭವವನ್ನು ನೀಡಿತು.
ಮಿಲನ್ ಹಾಗೂ ಅರ್ಪಿತ ಮುಥಾ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಯಶಸ್ಸಿಗೆ ಕಿಶನ್ ಕಟಾರಿಯಾ, ಧ್ರುವ ಮುಥಾ, ಕನಿಷ್ ಜೈನ್, ಯಶ್ ಕೊಠಾರಿ, ಇತರರು ಶ್ರಮಿಸಿದ್ದರು. ಉತ್ತಮ ನೃತ್ಯ ಪ್ರದರ್ಶನದ ಆಧಾರದ ಮೇಲೆ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ನವರಾತ್ರಿ-ದಸರಾ ಸಂಭ್ರಮವನ್ನು ಹೆಚ್ಚಿಸಿತು.