ಜಿಲ್ಲೆ

ನೋಡುಗರನ್ನು ರಂಜಿಸಿದ ನೃತ್ಯ

Mysuru - Desk - Naveen Kumar H P


ಹೊಳೆನರಸೀಪುರ: ಮಹಾಗಣಪತಿ ಪೆಂಡಾಲ್ ಸಾಂಸ್ಕೃತಿಕ ವೇದಿಕೆಯಲ್ಲಿ ಶನಿವಾರ ಕ್ರಿಯೇಟೀವ್ ಡ್ಯಾನ್ಸ್ ತರಬೇತಿ ಶಾಲೆಯ ಪ್ರಥಮ್ ಅವರಿಂದ ತರಬೇತಿ ಪಡೆದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಪಾಲಕರು ನಡೆಸಿಕೊಟ್ಟ ಜನಪದ ನೃತ್ಯ, ಕಂಸಾಳೆ ನೃತ್ಯ, ವೀರಗಾಸೆ ನೃತ್ಯ, ಚಲನಚಿತ್ರ ಗೀತೆಗಳ ನೃತ್ಯ ಜನರ ಮನರಂಜನೆ ನೀಡಿತು.
ನ್ಯಾಷನಲ್ ಕರಾಟೆ ಶಾಲೆಯ ಶಿಕ್ಷಕ ಅಬ್ದುಲ್ ಹೈ ಮಾರ್ಗದರ್ಶನದಲ್ಲಿ ಕರಾಟೆ ಶಾಲೆಯ ವಿದ್ಯಾರ್ಥಿಗಳು ನೀಡಿದ ಕರಾಟೆ ಪ್ರದರ್ಶನವೂ ಆಸಕ್ತಿದಾಯಕವಾಗಿತ್ತು. ಸ್ವರ್ಣಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಬಗೆಯ ನೃತ್ಯಮಾಡಿದರು. ಮಹಾಗಣಪತಿ ಸೇವಾ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಸದಸ್ಯರು ಪ್ರಥಮ್ ಮತ್ತು ತಂಡದವರನ್ನು ಸನ್ಮಾನಿಸಿ ಗೌರವಿಸಿದರು.