ಹಡಗಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಟಗರಿನ ಕಾಳಗದಲ್ಲಿ ಜಯಶಾಲಿಯಾದ ಟಗರುಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ದೇವಪ್ಪ ರಾಠೋಡ, ದುರ್ಗಪ್ಪ ಕಟ್ಟಿಮನಿ, ಬಸವರಾಜ್ ತಳವಾರ್, ಶರಣಪ್ಪ ತುಗ್ಲಿ, ವೆಂಕನಗೌಡ ಪೊಪಾ, ಛತ್ರಪ್ಪ ವಾಲೇಕಾರ ಇದ್ದರು. 
ಜಿಲ್ಲೆ

ಜನಮನಸೂರೆಗೊಂಡ ಟಗರಿನ ಕಾಳಗ

ನರೇಶ್ ಕುಮಾರ್

ಮುದಗಲ್: ಸಮೀಪದ ಹಡಗಲಿ ಗ್ರಾಮದಲ್ಲಿ ಶ್ರೀ ಉಟಕನೂರು ಮರಿಬಸವ ಲಿಂಗ ತಾತನ ಜಾತ್ರೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಟಗರಿನ ಕಾಳಗ ರೋಮಾಂಚನಗೊಳಿಸಿತು.

ಮೈದಾನದಲ್ಲಿ ಟಗರುಗಳು ಪರಸ್ಪರ ಹಿಂದೆ ಸರಿದು ಡಿಕ್ಕಿ ಒಡೆಯುತ್ತಿದ್ದಂತೆ ನೆರೆದ ಜನರು ಚಪ್ಪಾಳೆ, ಶಿಳ್ಳೆಹಾಕಿ ಸಂಭ್ರಮಿಸಿದರು. ಕಾಳಗದಲ್ಲಿ 20ಕ್ಕೂ ಹೆಚ್ಚು ಟಗರುಗಳು ಭಾಗವಹಿಸಿದ್ದವು. ಕನಕಗಿರಿ ಟಗರು-ಪ್ರಥಮ (11 ತೊಲ ಬೆಳ್ಳಿ ಕಡಗ), ತಲೇಖಾನ್ ಟಗರು-ದ್ವಿತೀಯ (9 ತೊಲ ಬೆಳ್ಳಿ ಕಡಗ), ದೇವಗಡ್ಡಿ ಗ್ರಾಮದ ಟಗರು-ತೃತೀಯ (7 ತೊಲ ಬೆಳ್ಳಿ ಕಡಗ) ಬಹುಮಾನ ಪಡೆದಿದ್ದು, ಆಯಾ ಟಗರುಗಳ ಮಾಲೀಕರಿಗೆ ಬೆಳ್ಳಿ ಕಡಗ ವಿತರಿಸಲಾಯಿತು.

ಮಹಾಂತಯ್ಯ ಸ್ವಾಮಿಗಳು, ಮುಖಂಡರಾದ ಬಸನಗೌಡ ಮಾಲಿಪಾಟೀಲ್, ಬಸಪ್ಪ ಕಂಬಳಿ, ತಿಮ್ಮನಗೌಡ ದಳಪತಿ, ಚತ್ರಪ್ಪ ಬಂಗಿ, ತಿಪ್ಪಣ್ಣ, ವೇಮರೆಡ್ಡಪ್ಪ, ಅಶೋಕ್, ಮಹದೇವಪ್ಪ, ಮುದ್ದಪ್ಪ, ಅಮರಪ್ಪ ಬಂಗಿ, ದಾಸರ ವೆಂಕಟೇಶ, ಅಮರೇಶ್ ವಿಟ್ಲಾಪುರ ಇತರರಿದ್ದರು.