ಶ್ರೀನಿವಾಸಪುರ: ಪ್ರಕೃತಿ ವಿಕೋಪದಿಂದಾಗಿ ಮಾವು ಬೆಳೆಗಾರರು ಬೆಳೆಯೂ ಇಲ್ಲದೆ, ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲದೆ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಇತ್ತೀಚೆಗೆ ಸುರಿದ ಮಳೆ, ಬಿಸಿಲಿನ ತಾಪಕ್ಕೆ ತೋತಾಪುರಿ ಉದುರಿದ್ದು, ಇದ್ದ ಅಲ್ಪಸ್ವಲ್ಪ ಕಾಯಿಗಳನ್ನು ಕೀಳದೆ ಮರದಲ್ಲಿಯೇ ಬಿಡುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗ ಮರದಲ್ಲಿರುವ ಕಾಯಿಗಳೂ ರೋಗಕ್ಕೆ ತುತ್ತಾಗುತ್ತಿವೆ.
‘
ಪ್ರಸಕ್ತ ಋತುವಿನ ಉತ್ಪಾದನೆಯಲ್ಲಿ ಶೇ.70 ಕುಸಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಮರದಲ್ಲಿ ಎಲೆಗಳು ಕಾಣಿಸದ ರೀತಿಯಲ್ಲಿ ಹೂವು ಬಿಟ್ಟಿದ್ದವು. ಆದರೆ ಪ್ರಕೃತಿ ವಿಕೋಪದಿಂದ ಹೂವು, ಪಿಂದೆ ಉದುರಿವೆ. ನಂತರ ದಿನಗಳಲ್ಲಿ ಅಂದಾಜು ನಿರೀೆಯನ್ನೂ ತಲುಪಿಲ್ಲ.
ಮಾವು ಮಂಡಳಿ ಮೇಲೆ ಆರೋಪ: ಕಳೆದ ನಾಲ್ಕೈದು ವರ್ಷಗಳಿಂದ ಸಾಮ್ಯತೆ ಇರುವ ಸಂಸ್ಥೆ ಮಾವು ಬೆಳೆಗಾರರ ನೆರವಿಗೆ ಬಾರದಿರುವುದು ದುರಂತ. ಬೆಳೆಗಾರರು ಸಂಕಷ್ಟದಲ್ಲಿದ್ದರೂ ಮಾವು ಮಂಡಳಿಯಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂದು ಬೆಳೆಗಾರರು ಆರೋಪಿಸಿದ್ದಾರೆ.
ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರೂ ಸರ್ಕಾರ ಮೀನಮೇಷ ಎಣಿಸುತ್ತಿದೆ. ಪಕ್ಕದ ಆಂಧ್ರಪ್ರದೇಶ ಸರ್ಕಾರ ತೋತಾಪುರಿಗೆ 4 ರೂ. ಸಹಾಯಧನ ಘೋಷಣೆ ಮಾಡಿ, ಕಾರ್ಖಾನೆಗಳಿಗೆ ರೈತರಿಂದ 8 ರೂ.ಗೆ ಖರೀದಿ ಮಾಡುವಂತೆ ಆದೇಶಿಸಿದೆ. ಆದರೆ ನಮ್ಮಲ್ಲಿ ಬೆಳೆ ಮರದಲ್ಲೇ ಹಾಳಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಂದು ವೇಳೆ ಕಾಯಿ ಕಿತ್ತರೂ ಅದನ್ನು ಮಾರುಕಟ್ಟೆಗೆ ಸಾಗಿಸಲು ಸಹ ಖರ್ಚು ಸರಿದೂರಿಸಲು ಆಗುವುದಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು 1 ಟನ್ನಿಗೆ 15 ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಲಿ. > ನೀಲಟೂರು ಚಿನ್ನಪ್ಪ ರೆಡ್ಡಿ ಅಧ್ಯಕ್ಷ, ಕೋಲಾರ ಜಿಲ್ಲಾ ಮಾವ ಬೆಳೆಗಾರರ ಕ್ಷೇಮಾಭಿ ವೃದ್ಧಿ ಸಂಘ