ಹುಲಿ ದಾಳಿಗೆ ಬಲಿಯಾದ ಹಸುವಿನೊಂದಗಿಗೆ ಮಾಲೀಕರಾದ ರಘು ಸೋಮಯ್ಯ. 
ಜಿಲ್ಲೆ

ಬೆಸಗೂರಿನಲ್ಲಿ ಹುಲಿ ದಾಳಿಗೆ ಹಸು ಬಲಿ

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.

ಸ್ಥಳೀಯ ನಿವಾಸಿ ಕೋಳೆರ ರಘು ಸೋಮಯ್ಯ ಅವರಿಗೆ ಸೇರಿದ ಹಸು ಬಲಿಯಾಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ಭಾನುವಾರ ರಾತ್ರಿ ದಾಳಿ ಮಾಡಿ ಕೊಂದು ಹಾಕಿದೆ. ಗ್ರಾಮದಲ್ಲಿ ಆತಂಕ ಮೂಡಿಸಿರುವ ಹುಲಿಯನ್ನು ತಕ್ಷಣ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.