ಬೈಕ್ ಜಖಂಗೊಂಡಿರುವುದು. 
ಜಿಲ್ಲೆ

ತಿ.ನರಸಿಪುರ ಮೂಲದ ದಂಪತಿ ಸಾವು

ಲೋಕೇಶ್ ಮನು. ಡಿ

ಮದ್ದೂರು : ಸಮೀಪದ ಉಪ್ಪಿನಕೆರೆ ಗೇಟ್ ಬಳಿ ಭಾನುವಾರ ಸಂಜೆ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೃತಪಟ್ಟಿದ್ದು, ಕಾರಿನಲ್ಲಿದ್ದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದೆ.


ಮೈಸೂರು ಜಿಲ್ಲೆ, ತಿ.ನರಸಿಪುರ ತಾಲೂಕಿನ ಹಿರಿಯೂರು ಗ್ರಾಮದ ದರ್ಶನ(28), ಜ್ಯೋತಿ(24) ಮೃತ ದಂಪತಿ. ಕಾರಿನಲ್ಲಿದ್ದ ಬೆಂಗಳೂರು ಮೂಲದ ವಿಸ್ಮಯ ಎಂಬ ಮಗುವಿಗೆ ಸಣ್ಣಪುಣ್ಣ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ದರ್ಶನ್, ಜ್ಯೋತಿ ದಂಪತಿ ತುಮಕೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಗಳಾಗಿದ್ದು, ಸಂಕ್ರಾಂತಿ ಹಿನ್ನೆಲೆಯಲ್ಲಿ ತುಮಕೂರಿನಿಂದ ಸ್ವಗ್ರಾಮವಾದ ಹಿರಿಯೂರಿಗೆ ಬೈಕ್‌ನಲ್ಲಿ ಬರುತ್ತಿದ್ದರು, ಉಪ್ಪಿನಕೆರೆ ಗೇಟ್ ಬಳಿಯ ಮದ್ದೂರು-ಮಳ್ಳವಳ್ಳಿ ಹೆದ್ದಾರಿಯಲ್ಲಿ ಮಳವಳ್ಳಿ ಕಡೆಯಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜ್ಯೋತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮಗು ವಿಸ್ಮಯ ಹೊರತುಪಡಿಸಿ ಕಾರಿನಲ್ಲಿದ್ದವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.