ಜಿಲ್ಲೆ

ಅಪಘಾತದಲ್ಲಿ ದಂಪತಿ ಮೃತ

ರೇಷ್ಮೆ ನಗರ ಡೆಸ್ಕ್

ಕೊಡಗಿನಿಂದ ವಾಪಸಾಗುವಾಗ ಬೆಂಗಳೂರು& ಮೈಸೂರು ಎಕ್ಸ್​ಪ್ರೆಸ್​ ಹೈವೇಯಲ್ಲಿ ಅವಡ

ಚನ್ನಪಟ್ಟಣ: ಬೆಂಗಳೂರು& ಮೈಸೂರು ಎಕ್ಸ್​ಪ್ರೆಸ್​ ಹೈವೇಯ ಕೋಮನಹಳ್ಳಿ ಬಳಿ ಮಂಗಳವಾರ ಕಾರು ಮತ್ತು ಸರಕು ಸಾಗಣೆ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ಬಾಗಲಗುಂಟೆ ಮನಿಕೊಂಡಪ್ಪ ಲೇಔಟ್​ ನಿವಾಸಿಗಳಾದ ಸೋಮಯ್ಯ (73) ಹಾಗೂ ಸರಸ್ವತಿ (65) ಮೃತರು. ಕಾರು ಚಲಾಯಿಸುತ್ತಿದ್ದ ಪುತ್ರ ಪವನ್​ (35) ಎಂಬುವರು ಗಾಯಗೊಂಡಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಂಪತಿ ಮೃತದೇಹಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತ@ ಕೊಡಗಿನವರಾದ ಸೋಮಯ್ಯ ಕುಟುಂಬ ಬೆಂಗಳೂರಿನಲ್ಲಿ ವಾಸವಿದ್ದು, ಕಾರ್ಯನಿಮಿತ್ತ ಊರಿಗೆ ಬಂದು ವಾಪಸಾಗುವಾಗ ದುರ್ಟನೆ ಸಂಭವಿಸಿದೆ. ಕಾರಿನ ಮುಂದೆ ಸಾಗುತ್ತಿದ್ದ ಗೂಡ್ಸ್​ ವಾಹನದ ಚಕ್ರ ಕಳಚಿಕೊಂಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.