ಜಿಲ್ಲೆ

ಕರೊನಾಗೆ ಒಂದೇ ಕುಟುಂಬದ ನಾಲ್ವರು ಬಲಿ!

ಬಾಗಲಕೋಟೆ: ಮಹಾಮಾರಿ ಕರೊನಾ ಮರಣಮೃದಂಗ ಬಾರಿಸುತ್ತಿದ್ದು, ಸಾವಿನ ಸರಣಿ ಮುಂದುವರಿದಿದೆ. ಕೋಟ್ಯಂತರ ಜನರ ಬದುಕನ್ನ ಮೂರಾಬಟ್ಟೆ ಮಾಡಿರುವ ಈ ಸೋಂಕು ಹಲವರನ್ನು ತಬ್ಬಲಿ ಮಾಡಿದೆ. ಇಡೀ ಕುಟುಂಬವನ್ನೂ ಬಲಿ ಪಡೆದಿದೆ. ಇದೀಗ ಕರೊನಾಗೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿರುವ ಘಟನೆ ರಬಕವಿ-ಬನಹಟ್ಟಿಯಲ್ಲಿ ಸಂಭವಿಸಿದೆ.

ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಬಾಳಪ್ಪ ಶಿರಹಟ್ಟಿ (89), ಸುಮಿತ್ರಾ ಭೂಪಾಲ ಶಿರಹಟ್ಟಿ(61), ಕಾಶವ್ವ ಶ್ರೀಪಾಲ ಪಡನಡಿ (42) ಮತ್ತು ಶೋಭಾ ಅಲ್ಲಪ್ಪ ಪಡನಡಿ ಮೃತ ದುರ್ದೈವಿಗಳು. ಇವರೆಲ್ಲರೂ ಒಂದೇ‌ ಕುಟುಂಬದವರಾಗಿದ್ದು, ಕಳೆದ 15 ದಿನದಲ್ಲಿ ಮೂರ್ನಾಲ್ಕು ದಿನದ ಅಂತರದಲ್ಲಿ ಒಟ್ಟು ನಾಲ್ವರ ಕರೊನಾಗೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯಲ್ಲಿ ಸಂಭವಿಸಿದ ಸಾವಿನ ಸರಣಿಗೆ ಇಡೀ ಕುಟುಂಬ ಕಂಗೆಟ್ಟಿದ್ದು, ಶೋಕ ಸಾಗರದಲ್ಲಿ ಮುಳುಗಿದೆ.