ಜಿಲ್ಲೆ

ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ

Davangere - Desk - Mahesh Babu E

ಸಿರಿಗೆರೆ: ಗ್ರಾಮದ ಗುರುಶಾಂತೇಶ್ವರ ದಾಸೋಭವನದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಈಚೆಗೆ ಏರ್ಪಡಿಸಲಾಗಿತ್ತು. ಏರೋಬಿಕ್ ಭತ್ತದ ಕುರಿತು ಬೆಂಗಳೂರಿನ ಕೃಷಿ ವಿಜ್ಞಾನಿ ಪ್ರೊ.ಎಚ್.ಇ.ಶಶಿಧರ್ ಮಾಹಿತಿ ನೀಡಿದರು.

ಶ್ರೀ ಶಿವಕುಮಾರ ಶ್ರೀಗಳ ಶದ್ದಾಂಜಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರನ್ನು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗೌರವಿಸಿದರು.

ವಿಜ್ಞಾನಿಗಳಾದ ಎನ್.ಬಿ.ಪ್ರಕಾಶ್, ಪ್ರೊ.ಎನ್.ಆರ್ ಗಂಗಾಧರಪ್ಪ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಬಿ ರಂಗನಾಥ್, ಆಡಳಿತ ಅಧಿಕಾರಿ ಡಾ.ಎಚ್.ವಿ.ವಾಮದೇವಪ್ಪ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರಳಸಿದ್ದಯ್ಯ, ದಾವಣಗೆರೆ ಶಿವಸೇನೆ ಅಧ್ಯಕ್ಷ ಶಶಿಧರ್ ಹಾಗೂ ನೂರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.