ತುಮಕೂರು: ಕಾಂಗ್ರೆಸ್ನಲ್ಲಿ ಪಕ್ಷದ ಅಧ್ಯಕ್ಷರ ಆದೇಶವನ್ನು ಎಲ್ಲರೂ ಪಾಲಿಸಬೇಕು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅವರೇ ನಮ್ಮ ಹೈಕಮಾಂಡ್. ಹಾಗಾಗಿ ಅವರ ಹೇಳಿಕೆಯನ್ನು ಯಾರೂ ತಿರಸ್ಕರಿಸಬಾರದು ಎಂದು ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ್, ನಾನು ಸಿಎಂ ಆಗಬೇಕೆಂಬ ಆಸೆ ನನ್ನ ಅಭಿಮಾನಿಗಳಿಗೂ ಇದೆ. ಎಲ್ಲ ಮುಖಂಡರು, ಅಭಿಮಾನಿಗಳಿಗೂ ಅವರ ನಾಯಕ ಸಿಎಂ ಆಗಬೇಕೆಂಬ ಆಸೆ ಸಹಜ. ಇದಕ್ಕೂ ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು, ಜಮೀರ್ ಅಹ್ಮದ್ ಪಕ್ಷದ ಅಧ್ಯಕ್ಷರ ಸೂಚನೆ ಪಾಲಿಸಬೇಕು ಎಂದರು. ಇದನ್ನೂ ಓದಿರಿ ರೋಹಿಣಿ ಸಿಂಧೂರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಭಿನ್ನಾಭಿಪ್ರಾಯಗಳಿದ್ದು ನಮ್ಮ ಪಕ್ಷದ ಉಸ್ತುವಾರಿ ಸರ್ಜೆವಾಲ್ ರಾಜ್ಯಕ್ಕೆ ಆಗಮಿಸಿ ಸರಿಪಡಿಸುತ್ತಾರೆ. ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದ್ದು, ಕಾಂಗ್ರೆಸ್ ಅಧಿಕಾರ ಹಿಡಿಯುವ ವಾತಾವರಣ ರಾಜ್ಯದೆಲ್ಲೆಡೆ ಕಾಣಿಸುತ್ತಿದೆ ಎಂದರು.