ಬೆಂಗಳೂರು: ಕೆನರಾ ಬ್ಯಾಂಕ್ ಮಾಹಿತಿ ತಂತ್ರಾಜ್ಞಾನ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕ- ಯುವತಿಯರಿಗೆ ಕಂಪ್ಯೂಟರ್ ಹಾಗೂ ಹಾರ್ಡ್ವೇರ್ ಮತ್ತು ನೆಟ್ವರ್ಕ್ ಅಡ್ಮಿನಿಸ್ಟ್ರೇಷನ್ನಲ್ಲಿ 3 ತಿಂಗಳ ಉಚಿತ ತರಬೇತಿ ನೀಡುತ್ತಿದೆ.
ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ಪಿಯುಸಿ, ಪದವಿ, ಡಿಪ್ಲೊಮಾ ಹೊಂದಿದವರಿಗೆ ಆದ್ಯತೆ. 18ರಿಂದ 27 ವರ್ಷದೊಳಗಿನರು ಹಾಗೂ ಪರಿಶಿಷ್ಟ ಜಾತಿ/ ವರ್ಗದದಲ್ಲಿ 30 ವರ್ಷದವರೆಗಿನವರು ತರಬೇತಿ ಪಡೆಯಲು ಅರ್ಹರು. ಬೆಂಗಳೂರಿನ ಮಲ್ಲೆಶ್ವರದಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಾಜ್ಞಾನ ತರಬೇತಿ ಸಂಸ್ಥೆಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಪ್ರತಿದಿನ ಬೆಳಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲಿವೆ. ವಿಳಾಸ: ಕೆನರಾ ಬ್ಯಾಂಕ್ ಮಾಹಿತಿ ತಂತ್ರಾಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, ಮಲ್ಲೆಶ್ವರ, ಬೆಂಗಳೂರು. ದೂ: 2344 0036, 2346 3580, 94485 38107ಗೆ ಕರೆ ಮಾಡಿ.