ಬಾದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರವನ್ನು ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ 1008 ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಗುರುಬಸವ ದೇವರು ಇತರರಿದ್ದರು. 
ಜಿಲ್ಲೆ

ಸಮರ್ಥ ಸಮಾಜ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ

Vijayapura - Desk - Gurappa Lokuri

ಬಾದಾಮಿ: ಮನೆ ಮೊದಲು ಪಾಠ ಶಾಲೆ, ತಾಯಿ ಮೊದಲ ಗುರು ಎಂಬಂತೆ ಮಕ್ಕಳ ಶಿಕ್ಷಣದಲ್ಲಿ ತಾಯಿಯ ಪಾತ್ರ ಬಹು ಮುಖ್ಯವಾಗಿದೆ. ಸಮರ್ಥ ಸಮಾಜ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಶಿವಯೋಗ ಮಂದಿರದ ಸದಾಶಿವ ಸ್ವಾಮೀಜಿ ಹೇಳಿದರು.

ತಾಲೂಕಿನ ಶಿವಯೋಗಮಂದಿರದಲ್ಲಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಯೋಗಮಂದಿರ ಸಂಸ್ಥೆ ವಟುಗಳಿಗೆ ಮಾರ್ಗದರ್ಶನ ಮಾಡಿ ನಾಡಿನ ವಿವಿಧ ಮಠಗಳನ್ನು ಮುನ್ನೆಡೆಸಿ ಉತ್ತಮ ಸಮಾಜ ನಿರ್ಮಿಸುವುದರೊಂದಿಗೆ ಪರಿಶುದ್ಧ ವಿಭೂತಿ ತಯಾರಿಸಿ ನಾಡಿಗೆ ನೀಡುವ ಜತೆಗೆ ಸಮಾನತೆ ಸಾರುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಶ್ರೀ 1008 ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನಾಡಿನಲ್ಲಿ ಮಠಗಳು ಸೇವಾ ಮನೋಭಾವದಿಂದ ಹುಟ್ಟಿಕೊಂಡಿವೆ. ನಾಡಿಗೆ ಉತ್ತಮ ಸೇವೆ ಕೊಟ್ಟಿರುವ ಶಿವಯೋಗಮಂದಿರದಲ್ಲಿ ಶಿಬಿರ ಹಮ್ಮಿಕೊಂಡಿದ್ದು ಉತ್ತಮವಾಗಿದೆ ಎಂದರು.

ಗುರುಬಸವ ದೇವರು ಮಾತನಾಡಿದರು. ಪ್ರಾಚಾರ್ಯ ಡಾ.ಎಚ್.ಎಸ್. ಘಂಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಗುರುಸಿದ್ಧೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರಾದ ಸಿದ್ದಬಸಪ್ಪ ಕೆಲೂಡಿ, ಸುರೇಖಾ ತಿಪ್ಪಾ,ಪ್ರೇಮಾ ಚಿಂದಿ, ಶಿಬಿರದ ಸಂಯೋಜಕ ಇಂದುಮತಿ ಬೋರಣ್ಣವರ, ಕಾರ್ಯದರ್ಶಿ ಗಿರಿಜಾ ಮಾದಗುಂಡಿ, ಸರಿತಾ ಚಂದನ್ನವರ, ಎಸ್.ಎಂ. ನೆಲ್ಲೂರ, ವಿ.ಕೆ. ಬದಿ ಹಾಗೂ ಶಿಬಿರಾರ್ಥಿಗಳು ಇದ್ದರು.