ನರಗುಂದ: ಕರ್ಮ ಕಳೆದು ಧರ್ಮವನ್ನು ಬಿತ್ತಿ ಜನಸಾಮಾನ್ಯರ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.
ಪಟ್ಟಣದ ಮಿನಿವಿಧಾನ ಸೌಧ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಸಮಾಜದ ಅಧ್ಯಕ್ಷ ನಂದೀಶ ಮಠದ, ವಿಶ್ರಾಂತ ಪ್ರಾಚಾರ್ಯ ಸಿ.ಎಸ್. ಸಾಲೂಟಗಿಮಠ ಮಾತನಾಡಿ, ಧರ್ಮಗಳ ಸಂಗಮ, ಯೋಗ, ತ್ಯಾಗದ ನಾಡಾಗಿರುವ ಭಾರತದಲ್ಲಿ ವೀರಶೈವ ಧರ್ಮವು ತನ್ನ ವಿಶಿಷ್ಠ ವಿಚಾರಧಾರೆ ಅರ್ಥಪೂರ್ಣ ಶಿಷ್ಯ ಆಚಾರ ಸಂಹಿತೆಯಿಂದಾಗಿ ಬುದ್ಧಿಜೀವಿಗಳು ಹಾಗೂ ಭಾವನಾ ಜೀವಿಗಳ ಗಮನವನ್ನು ವಿಶ್ವ ಮಟ್ಟದಲ್ಲಿ ಸೆಳೆದಿದೆ ಎಂದು ತಿಳಿಸಿದರು.
ಜಿ.ಎಸ್. ಹಿರೇಮಠ, ಸಿ.ಎಂ. ಹಿರೇಮಠ, ಸಂಗಮೇಶ ಸಾಂಭಯ್ಯನಮಠ, ವಿಶ್ವನಾಥ ಹಡಗಲಿಮಠ, ಮುತ್ತು ಕಾಡದೇವರಮಠ, ಕಪಲಯ್ಯ ಹಿರೇಮಠ, ಪ್ರಭು ಗುಡ್ಡಾಪೂರಮಠ, ಎಸ್.ಟಿ. ಆಯಟ್ಟಿ, ರವಿ ಬಡಿಗೇರ, ವೀರೇಶ ಮಾಲಿನಮಠ, ಈಶ್ವರಯ್ಯ ಹಿರೇಮಠ, ಕುಮಾರ ಗುರಪ್ಪಗೌಡ್ರ, ಶಿವಶಂಕರ ಹಿರೇಮಠ, ಬಸವರಾಜ ಕೊಳೂರಮಠ, ಉಮೇಶ ಶಿರುಂದಮಠ, ಸಂತೋಷ ದೊಡಮನಿ, ಮನೋಜ ಸಂಗಳಮಠ, ಅಭಿಷೇಕ ದೇಶಪಾಂಡೆ, ನೀಲಕಂಠಯ್ಯ ಅಲ್ಲಪ್ರಭುದೇವಮಠ, ಉಮೇಶ ಹಿರೇಮಠ, ಇತರರಿದ್ದರು.