Air Gun : ಜಗಳವಾಡಿದ ಎಂಬ ಕಾರಣಕ್ಕೆ ಸ್ನೇಹಿತನ ಗುದದ್ವಾರಕ್ಕೆ ಏರ್ ಗನ್‌ನಿಂದ ಗಾಳಿ ಬಿಟ್ಟಿರುವ ವಿಲಕ್ಷಣ ಪ್ರಕರಣ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆಯಲ್ಲಿ ನೊಂದಿರುವ ವ್ಯಕ್ತಿ ಪರಮೇಶ್, ಸಹೋದ್ಯೋಗಿ ಗೋವಿಂದ ಆರೋಪಿ. ಇತ್ತೀಚೆಗೆ ಇಬ್ಬರ ನಡುವೆ ಸಣ್ಣ ಜಗಳವಾಗಿದೆ. ಈ ವಿಚಾರಕ್ಕೆ ಕೋಪಗೊಂಡಿದ್ದ ಆರೋಪಿ ಗೋವಿಂದ, ಸ್ನಾನ ಮಾಡುತ್ತಿದ್ದ ಸ್ನೇಹಿತನಿಗೆ ಏರ್ ಗನ್ ಹಿಡಿದು ಒಳ ಉಡುಪು ತೆಗೆದು ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಇದರಿಂದ ಹೊಟ್ಟೆ ಊದಿಕೊಂಡಿದ್ದು, ನೋವು ತಡೆಯಲಾಗದೆ ಕಿರುಚಿಕೊಂಡ ಕಾರಣ ಆರೋಪಿ ಸ್ಥಳದಿಂದ ಓಡಿಹೋಗಿದ್ದಾನೆ.
ಇದನ್ನೂ ಓದಿ: ಸ್ಪಾಂಜ್ ಬಾಂಬ್… ಇಸ್ರೇಲ್ನ ಹೊಸ ರಹಸ್ಯ ಆಯುಧ! ಇದು ಎಷ್ಟು ಅಪಾಯಕಾರಿ ಗೊತ್ತಾ? Israel Sponge Bomb
ತಕ್ಷಣವೇ ಕಾರ್ಖಾನೆಯ ವೈದ್ಯರಿಗೆ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 24 ದಿನದಿಂದ ಚಿಕಿತ್ಸೆ ಮುಂದುವರಿದಿದೆ. ಗೋವಿಂದ ಎಂಬುವನು ತನ್ನ ಪತಿಯ ಗುದದ್ವಾರದ ಒಳಗೆ ಗಾಳಿ ಬಿಟ್ಟು ಕೊಲ್ಲಲು ಪ್ರಯತ್ನಿಸಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಮೇಶ್ ಪತ್ನಿ ಹಾರೋಹಳ್ಳಿ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.