ಜಿಲ್ಲೆ

ಮೈಸೂರು ಚಾಮುಂಡಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ, ನಾಡದೇವಿಗೆ ವಿಶೇಷ ಪೂಜೆ

arunakunigal

ಮೈಸೂರು: ಚಾಮುಂಡಿ ಬೆಟ್ಟಕ್ಕೆ ಸೋಮವಾರ ಬೆಳಗ್ಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಬಂದ ಬೊಮ್ಮಾಯಿ ಅವರನ್ನು ಮುಜರಾಯಿ ಇಲಾಖೆಯು ಪೂರ್ಣಕುಂಭ ಮೆರವಣಿಗೆಯಲ್ಲಿ ಸ್ವಾಗತಿಸಿತು. ಸಿಎಂಗೆ ಸಚಿವರಾದ ಮುರುಗೇಶ್ ನಿರಾಣಿ, ಡಾ.ಕೆ.ಸುಧಾಕರ್​, ಎಸ್.ಟಿ. ಸೋಮಶೇಖರ್​, ಬೈರತಿ ಬಸವರಾಜ್​, ಡಾ.ನಾರಾಯಣಗೌಡ ಸಾಥ್​ ನೀಡಿದರು. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕ ಎಸ್‌.ಎ.ರಾಮದಾಸ್ ಗೈರಾಗಿದ್ದರು.

ಮೈಸೂರು ಜಿಲ್ಲಾಧಿಕಾರಿ ಜತೆ ಕೋವಿಡ್ ನಿಯಂತ್ರಣ ಕುರಿತು ಸಿಎಂ ಸಭೆ ನಡೆಸಲಿದ್ದು, ಬಳಿಕ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡುವರು. (ದಿಗ್ವಿಜಯ ನ್ಯೂಸ್​)